Mysore
22
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

 ನಟಿ ರಚಿತಾ ರಾಮ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಖ್ಯಾತ ನಿರ್ದೇಶಕ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ನಲ್ಲಿ ದೂರು ಸಲ್ಲಿಕೆಯಾಗಿದ್ದು, ಕ್ರಮಕ್ಕೆ ಖ್ಯಾತ ನಿರ್ದೇಶಕ ಒತ್ತಾಯಿಸಿದ್ದಾರೆ.

ಸಂಜು ವೆಡ್ಸ್‌ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್‌ ತಮ್ಮದೇ ಸಿನಿಮಾದ ನಾಯಕಿ ರಚಿತಾ ರಾಮ್‌ ವಿರುದ್ಧ ಮಂಗಳವಾರ ಫಿಲ್ಸ್‌ ಚೇಂಬರ್‌ಗೆ ದೂರು ಸಲ್ಲಿಸಿದ್ದಾರೆ.

ರಚಿತಾ ರಾಮ್‌ ಸಂಜು ವೆಡ್ಸ್‌ ಗೀತಾ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್‌ ಆಗುವ ಮತ್ತು ನಂತರ ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ. ಹೀಗಾಗಿ ನಟಿಯ ವಿರುದ್ಧ ಚಿತ್ರತಂಡ ದೂರು ನೀಡಿದ್ದು, ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದ ಒತ್ತಾಯಿಸಿದೆ.

ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್‌ ಯಾವುದೇ ಸಪೋರ್ಟ್‌ ಮಾಡಿಲ್ಲ. ರಾಕ್‌ಲೈನ್‌ ವೆಂಕಟೇಶ್‌ ಅವರು ಮನವೊಲಿಸಲು ಪ್ರಯತ್ನಿಸಿದ್ದರು ರಚಿತಾ ಒಪ್ಪಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ. ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರೂ ಒಂದು ದಿನವೂ ಸಪೋರ್ಟ್‌ ಮಾಡಿಲ್ಲ. ನಾವೇನು ಅವರಿಗೆ ಪೇಮೆಂಟ್‌ ಕಮ್ಮಿ ಕೊಟ್ಟಿಲ್ಲ ಎಂದು ನಿರ್ದೇಶಕ ನಾಗಶೇಖರ್‌ ಹಾಗೂ ನಾಯಕ ನಟ ಶ್ರೀನಗರ ಕಿಟ್ಟಿ ಫಿಲ್ಮ್‌ ಚೇಂಬರ್ಗ್‌ಗೆ ದೂರು ನೀಡಿದ್ದಾರೆ.

ಸಿನಿಮಾ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಛಲವಾದಿ ಕುಮಾರ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿದ್ದಾರೆ.

ಈ ದೂರು ಕುರಿತು ನಟಿ ರಚಿತಾ ರಾಮ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:
error: Content is protected !!