Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ವಿಕ್ರಮ್‍ ರವಿಚಂದ್ರನ್‍ ಅಭಿನಯದ ‘ಮುಧೋಳ್‍’ ಬಿಡುಗಡೆ ಯಾವಾಗ ಗೊತ್ತಾ?

ಸುಮಾರು ಎರಡು ವರ್ಷಗಳ ಹಿಂದೆ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್‍ ರವಿಚಂದ್ರನ್‍ ಅಭಿನಯದ ‘ಮುಧೋಳ್‍’ ಎಂಬ ಚಿತ್ರ ಸೆಟ್ಟೇರಿತ್ತು. ಈಗ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದ, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಹೌದು, ‘ಮುಧೋಳ್‍’ ಚಿತ್ರವು ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದರ ಹಿಂದಿನ ವಾರ ಜೈದ್‍ ಖಾನ್‍ ಅಭಿನಯದ ‘ಕಲ್ಟ್’ ಚಿತ್ರ ತೆರೆಗೆ ಬರಲಿದ್ದು, ಜೈದ್‍ ಮತ್ತು ವಿಕ್ರಮ್‍ ಅಭಿನಯದ ಎರಡನೆಯ ಚಿತ್ರಗಳು ಒಂದು ವಾರದ ಗ್ಯಾಪ್‍ನಲ್ಲಿ ಬಿಡುಗಡೆಯಾಗಲಿದೆ.

‘ಮುಧೋಳ್‍’ ಚಿತ್ರವನ್ನು ಇದಕ್ಕೂ ಮೊದಲು ರಕ್ಷಾ ಎನ್ನುವವರು ನಿರ್ಮಿಸುತ್ತಿದ್ದರು. ‘ಮುಧೋಳ್‍’ಗೂ ಮೊದಲು ಅವರು ವಿಕ್ರಮ್‍ ಸಹೋದರ ಮನೋರಂಜನ್‍ ರವಿಚಂದ್ರನ್‍ ಅಭಿನಯದ ‘ಮುಗಿಲ್ಪೇಟೆ’ ಚಿತ್ರವನ್ನು ನಿರ್ಮಿಸಿದ್ದರು. ಇದೀಗ ರಕ್ಷಾ ಜೊತೆಗೆ ಕೈಜೋಡಿಸಿರುವ ಅಮೃತಾ ಸಿನಿ ಕ್ರಾಫ್ಟ್ನ ವಿಜಯ್‍ ಟಾಟಾ ಚಿತ್ರವನ್ನು ಮುಂದುವರೆಸುತ್ತಿದೆ. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸುವುದರ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಸೇರಿದಂತೆ ಬೇರೆ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯ ವಿಜಯ್‍ ಟಾಟಾ, ವಿಕ್ರಮ್‍ ಅಭಿನಯದ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದರ ಬದಲು ಸಂಸ್ಥೆಯು ‘ಮುಧೋಳ್‍’ ಚಿತ್ರವನ್ನು ಮುಂದುವರೆಸುವುದರ ಜೊತೆಗೆ ಬಿಡುಗಡೆ ಮಾಡುತ್ತಿದೆ.

‘ಮುಧೋಳ್‍’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ಕಾರ್ತಿಕ್‍ ರಾಜನ್‍. ಚಿತ್ರದಲ್ಲಿ ವಿಕ್ರಮ್‍ ಎದುರು ಸಂಜನಾ ಆನಂದ್‍ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಯುವರಾಜ್‍ ಚಂದ್ರನ್‍ ಸಂಗೀತ ಸಂಯೋಜಿಸುತ್ತಿದ್ದು, ಸಂದೀಪ್‍ ವಳ್ಳೂರಿ ಛಾಯಾಗ್ರಹಣ ಮಾಡುತ್ತಿದ್ದಾರೆ.

Tags:
error: Content is protected !!