Mysore
27
overcast clouds

Social Media

ಸೋಮವಾರ, 23 ಜೂನ್ 2025
Light
Dark

ಸದ್ಯ ಹಾಡು; ಅ. 21ರಂದು ‘ಬಘೀರ’ ಚಿತ್ರದ ಟ್ರೇಲರ್ ಬಿಡುಗಡೆ

ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ ಬಿಡುಗಡೆಗೆ ಇನ್ನೇನು ಹೆಚ್ಚು ಸಮಯ ಉಳಿದಿಲ್ಲ. ಚಿತ್ರ ಬಿಡುಗಡೆಗೆ ಕೇವಲ 12 ದಿನಗಳಿದ್ದು, ಚಿತ್ರವನ್ನು ಪ್ರೇಕ್ಷಕರಿಗೆ ಮುಟ್ಟಿಸುವುದಕ್ಕೆ ಮುಂದಾಗಿದೆ. ಮೊದಲ ಹೆಜ್ಜೆಯಾಗಿ ಇದೇ ಸೋಮವಾರ, ಅಂದರೆ ಅ. 21ರಂದು ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

ಅದಕ್ಕೂ ಮೊದಲು ಚಿತ್ರದ ಮೊದಲ ಹಾಡಾದ ‘ರುಧಿರ ಧಾರ’ ಎಂಬ ಮೊದಲ ಹಾಡನ್ನು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗಾಗಲೇ ಒಂದು ಮಿಲಿಯನ್‍ ವೀಕ್ಷಣೆ ಆಗಿರುವುದು ವಿಶೇಷ.

‘ರುಧಿರ ಧಾರ’ ಶೀರ್ಷಿಕೆ ಗೀತೆಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆಯುವುದರ ಜತೆಗೆ ಹಾಡಿಗೆ ಧ್ವನಿ ನೀಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ರುಧಿರ ಧಾರ ಉಘೆ ಉಘೆ, ಮಾರ ಮಾರ ಕದನ ಕ್ರೂರ ಉಘೆ ಉಘೆ, ಬಘೀರ ಬಘೀರ, ಧ್ವಂಸ ಅಖಾಡ ಛಿದ್ರ ಮಾಡೋ ಅಟ್ಟಹಾಸ ಕೇಳು ಭೀಕರಾ, ಕಂಸ ಕಠೋರ ರಕ್ತ ಹೀರೋ ರುದ್ರ ರಕ್ಕಸ ಕಾಲ ಕಿಂಕರ…’ ಎಂದು ನಾಯಕನನ್ನು ಪರಿಚಯಿಸುವ ಗೀತೆ ಇದಾಗಿದ್ದು, ನಾಯಕ ಎಂಥವನೆಂದು ಈ ಹಾಡಿನಲ್ಲಿ ಬಣ್ಣಿಸಲಾಗಿದೆ.

‘ಬಘೀರ’ ಚಿತ್ರವನ್ನು ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಈ ಹಿಂದೆ ಯಶ್‍ ಅಭಿನಯದ ‘ಲಕ್ಕಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಡಾ. ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಉಗ್ರಂ’, ‘ಕೆಜಿಎಫ್‍’ ಮತ್ತು ‘ಸಲಾರ್’ ಚಿತ್ರಗಳ ನಿರ್ದೇಶಕ ಪ್ರಶಾಂತ್‍ ನೀಲ್‍ ಈ ಚಿತ್ರಕ್ಕೆ ಕಥೆ ರಚಿಸಿದ್ದಾರೆ.

‘ಬಘೀರ’ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ರುಕ್ಮಿಣಿ ವಸಂತ್‍, ಪ್ರಕಾಶ್‍ ರೈ, ರಂಗಾಯಣ ರಘು, ಅಚ್ಯುತ್‍ ಕುಮಾರ್, ಗರುಡ ರಾಮ್‍ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಮತ್ತು ಎ.ಜೆ. ಶೆಟ್ಟಿ ಛಾಯಾಗ್ರಹಣವಿದೆ.

Tags:
error: Content is protected !!