Mysore
31
scattered clouds

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಬಿಗ್‌ಬಾಸ್‌ ಟ್ರೋಫಿ ಗೆದ್ದ ಹನುಮಂತ

ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದು, ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್‌ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.

ಬಿಗ್‌ಬಾಸ್‌ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್‌ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡಭಾಗಕ್ಕೆ ತ್ರಿವಿಕ್ರಮ್‌ ನಿಲ್ಲಿಸಿಕೊಂಡಿದ್ದರು.

ಕೊನೆಗೆ ಹನುಮಂತನ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತರ ಸುದೀಪ್‌ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತರ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದರು.

ಕನ್ನಡದ ಬಿಗ್‌ಬಾಸ್‌ ಇತಿಹಾಸದಲ್ಲೇ ವೈಲ್ಡ್ ಕಾರ್ಡ್‌ ಸ್ಪರ್ಧಿ ವಿನ್ನರ್‌ ಆಗಿದ್ದು, ಇದೇ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ.

Tags: