ಕೇರಳ: ಕೇರಳದ ಕೊಟ್ಟಿಯೂರು ಶಿವನ ದೇವಾಲಯಕ್ಕೆ ನಟ ದರ್ಶನ್ ಹಾಗೂ ಕುಟುಂಬ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕೊಟ್ಟಿಯೂರು ಶಿವನ ದೇವಾಲಯಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಟ ದರ್ಶನ್ ಜೊತೆ ನಟ ಧನ್ವೀರ್ ಕೂಡ ಭಾಗಿಯಾಗಿದ್ದರು.
ವರ್ಷದಲ್ಲಿ 30 ದಿನ ಮಾತ್ರ ತೆರೆಯುವ ಈ ದೇವಸ್ಥಾನ ಕೇರಳದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದಲ್ಲಿ 28 ದಿನಗಳ ಕಾಲ ನಡೆಯುವ ವೈಶಾಖಮಹೋತ್ಸವವು ದೇವರಿಗೆ ತುಪ್ಪದಿಂದ ಸ್ನಾನ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇದನ್ನು ನೆಯ್ಯಟ್ಟಂ ಎಂದು ಕರೆಯಲಾಗುತ್ತದೆ.