Mysore
25
overcast clouds
Light
Dark

ಈ ಬಾರಿಯ ದಸರೆಗೆ ಸಜ್ಜಾಗಲಿ ವಿವಿಧ ಇಲಾಖೆ, ನಿಗಮಗಳ ಮಳಿಗೆಗಳು

ನಾಡಹಬ್ಬ ಜಂಬೂಸವಾರಿ ಮೆರವಣಿಗೆ ಮುಗಿದರೂ ತಿಂಗಳಾನುಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸುವ ದಸರಾ ವಸ್ತುಪ್ರದರ್ಶನದ ಸಿದ್ಧತೆ ಶೀಘ್ರ ಆರಂಭವಾಗಬೇಕಿದೆ. ಪ್ರಾಧಿಕಾರದ ಸಿದ್ಧತಾ ಕಾರ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಬೇಗನೆ ಶುರು ಮಾಡಿ ದಸರಾ ಹದಿನೈದು ದಿನಗಳು ಇರುವಂತೆಯೇ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಟ್ಟರೆ ಪ್ರವಾಸಿಗರು ಮತ್ತಷ್ಟು ಆಕರ್ಷಿತರಾಗುತ್ತಾರೆ. ದಸರಾ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳ ಮಳಿಗೆಗಳು ಸಜ್ಜಾಗುತ್ತದೆ ಎಂಬ ಸಿದ್ಧ ಉತ್ತರಕ್ಕೆ ಸಾಣೆ ಹಿಡಿಯಬೇಕಾಗಿದೆ. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ವಸ್ತು ಪ್ರದರ್ಶನ ನಡೆಯದ ಕಾರಣ ಈ ಬಾರಿ ಹೊಸತನದಿಂದ ಕೂಡಿರುವಂತೆ ಮಾಡಲು ಪ್ರಾಧಿಕಾರ ಮುಂದಾಗಬೇಕು. ಅದಕ್ಕೆ ಬೇಕಾದ ಸಹಕಾರ ನೆರವನ್ನು ಪ್ರವಾಸೋದ್ಯಮ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ನೀಡುವ ಮೂಲಕ ನಿರೀಕ್ಷಿಸಿದಂತೆ ಕೆಲಸ ಮಾಡಿದರೆ ಅನುಕೂಲವಾಗಲಿದೆ.

ನವರಾತ್ರಿಯ ಜಂಬೂಸವಾರಿ ಮುಗಿದರೂ ಸುಮಾರು ೧೦೦ರಿಂದ ೧೧೦ದಿನಗಳು ದಸರಾ ವಸ್ತು ಪ್ರದರ್ಶನ ನಡೆಯಲಿದೆ. ಇದನ್ನು ಹೊಸ ವರ್ಷಾಚರಣೆ ವರೆಗೂ ವಿಸ್ತರಿಸಿದಷ್ಟೂ ಪ್ರವಾಸೋದ್ಯಮಕ್ಕೆ ಅನುಕೂಲ. ಕಳೆದ ಎರಡು ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಷಗಳಲ್ಲಿ ಬಹುತೇಕ ಖಾಲಿ ಮಳಿಗೆಗಳಿಂದಲೇ ಉದ್ಘಾಟನೆಯಾಗುತ್ತಿರುವುದು ಇಂದಿಗೂ ದೊಡ್ಡ ಅಪವಾದವಾಗಿಟ್ಟಿದೆ. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ದಸರಾ ವಸ್ತುಪ್ರದರ್ಶನದ ಉದ್ಘಾಟನೆಯ ಮೊದಲ ದಿನವೇ ಎಲ್ಲ ಜಿಲ್ಲಾ ಪಂಚಾಯಿತಿಗಳ ಹಾಗೂ ಸರ್ಕಾರದ ಎಲ್ಲ ಇಲಾಖೆಗಳ ಮಳಿಗೆಗಳು ಉದ್ಘಾಟನೆಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಹೀಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಆ ವರ್ಷವೂ ಅರ್ಧದಷ್ಟು ಮಳಿಗೆಗಳು ಮಾತ್ರ ಉದ್ಘಾಟನೆಯಾಗಿದ್ದು. ಅದೇ ರೀತಿ ೨೦೧೯ರಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಅವರು ದಸರಾ ಆರಂಭದ ಹೊತ್ತಿಗೆ ಪೂರ್ಣವಾಗುವಂತೆ ಮಾಡಬೇಕೆಂದು ಸೂಚನೆ ನೀಡಿದರೂ ಸಜ್ಜಾಗಲು ತಿಂಗಳು ಹಿಡಿದಿತ್ತು. ಈಗ ಮತ್ತೊಮ್ಮೆ ವಸ್ತು ಪ್ರದರ್ಶನ ಬರಲು ದಿನಗಣನೆ ಶುರುವಾದರೂ ಏನು ಕೆಲಸ ಆರಂಭವಾಗಿಲ್ಲ. ಪ್ರತಿ ವರ್ಷ ಟೆಂರ್ಡ ಪ್ರಕಿ್ರೆುಂ ತಡವಾಗಿ ನಡೆಯುತ್ತಿರುವುದೇ ಉದ್ಘಾಟನಾ ದಿನವೂ ದಸರಾ ವಸ್ತುಪ್ರದರ್ಶನದ ಸಿದ್ಧತೆ ಪೂರ್ಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಟೆಂರ್ಡ ಪ್ರಕಿ್ರೆುಂ ಮೂಲಕವೇ ಆಹಾರ, ಬಟ್ಟೆ, ಆಟಿಕೆಗಳು ಸೇರಿದಂತೆ ಇತರ ವ್ಯಾಪಾರಿ ಮಳಿಗೆಗೆಳ ನಿರ್ಮಾಣದ ಕಾರ್ಯ ನಡೆಯಬೇಕಿದೆ.

ನಾನಾ ಕಾರಣಗಳಿಂದ ಪ್ರತಿ ವರ್ಷ ಟೆಂರ್ಡ ಪ್ರಕಿ್ರೆುಂ ತಡವಾಗುತ್ತಿರುವುದರಿಂದ ಮಳಿಗೆ ಹಂಚಿಕೆ ಪ್ರಕಿ್ರೆುಂ ನಿಧಾನಗೊಂಡು, ನಿಗದಿತ ಸಮಯದಲ್ಲಿ ಎಲ್ಲ ಮಳಿಗೆ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಪ್ರತಿ ವರ್ಷ ವಿವಿಧ ಜಿಲ್ಲಾ ಪಂಚಾಯಿತಿಗಳ ಮಳಿಗೆ ಸೇರಿದಂತೆ ೫೦ಕ್ಕೂ ಹೆಚ್ಚಿನ ಸರ್ಕಾರಿ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರತಿ ಬಾರಿಯೂ ಉದ್ಘಾಟನಾ ದಿನ ಸರ್ಕಾರಿ ಮಳಿಗೆಗಳು ಅರ್ಧದಷ್ಟೂ ತಲೆ ಎತ್ತುವುದಿಲ್ಲ. ಅನೇಕ ಜಿಲ್ಲಾ ಪಂಚಾಯಿತಿ ಮಳಿಗೆಗಳು ವಸ್ತುಪ್ರದರ್ಶನ ಕೊನೆಗೊಳ್ಳಲು ಒಂದು ದಿನ ಬಾಕಿ ಇರುವಂತೆ ಉದ್ಘಾಟನೆಯಾಗುವ ನಿದರ್ಶನಗಳು ಹಲವಿವೆ.

ಕರ್ನಾಟಕ ವಸ್ತು ಪ್ರದರ್ಶನಕ್ಕೆ ಎಲ್ಲ ಇದ್ದರೂ ದಸರಾ ಮಹೋತ್ಸವದ ವೇಳೆಗೆ ಖಾಸಗಿವರಿಗೆ ಟೆಂಡರ್ ನೀಡಿ ಸುಮ್ಮನಿರುತ್ತಾರೆ. ಪ್ರಾಧಿಕಾರಕ್ಕೆ ಅಧ್ಯಕ್ಷ, ಸಿಇಒ, ಎಇಇ, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ದರ್ಜೆಯ ೨೦ಕ್ಕೂ ಹೆಚ್ಚು ಅಧಿಕಾರಿಗಳು ಇದ್ದಾರೆ. ಆದರೆ, ಕಾರ್ಯಚಟುವಟಿಕೆಗಳು ಮಾತ್ರ ಅಂದುಕೊಂಡಂತೆ ಸಾಗುತ್ತಿಲ್ಲ. ಸರ್ಕಾರದಿಂದಲೇ ಪೂರ್ವಸಿದ್ಧತೆ ಮಾಡಿಕೊಂಡು ವಸ್ತುಪ್ರದರ್ಶನ ನಡೆಸಲು ಅವಕಾಶವಿದೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿರುವ ಮಾತಿನಂತೆ ದಸರೆ ಉದ್ಘಾಟನೆಗೆ ಹದಿನೈದು ದಿನಗಳಿರುವಂತೆ ವಸ್ತು ಪ್ರದರ್ಶನ ವೀಕ್ಷಣೆಗೆ ಸಜ್ಜಾಗಬೇಕು. ಎರಡು ವರ್ಷಗಳಿಂದ ನಿರೀಕ್ಷಿತ ಆದಾಯ ಇಲ್ಲದೆ ಸರ್ಕಾರದ ಅನುದಾನವನ್ನು ಖರ್ಚು ಮಾಡಿಕೊಂಡು ಕಾಲ ಕಳೆಯುತ್ತಿದ್ದ ಪ್ರಾಧಿಕಾರಕ್ಕೆ ಸರ್ಕಾರ ಅಧ್ಯಕ್ಷರನ್ನು ನೇಮಿಸಿರುವ ಕಾರಣ ತಕ್ಷಣವೇ ಟೆಂಡರ್ ಕರೆದು ಪ್ರಕ್ರಿಯೆ ಶುರು ಮಾಡಬೇಕಿದೆ. ಈಗಾಗಲೇ ಪ್ರಾಧಿಕಾರದ ಅಧ್ಯಕ್ಷರು ಒಂದು ಸುತ್ತಿನ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರ ಗಮನಕ್ಕೆ ತಂದು ಈ ಬಾರಿ ಹಲವಾರು ಅಮ್ಯೂಸ್ಮೆಂಟ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಅದೇ ರೀತಿ ಜಿಪಂ ಮಳಿಗೆಗಳು ತಮ್ಮ ತಮ್ಮ ಜಿಲ್ಲೆಯನ್ನು ಬಿಂಬಿಸುವಂತಹ ಮಳಿಗೆಗಳ ನಿರ್ಮಾಣ ಕಾರ್ಯವನ್ನು ಶುರು ಮಾಡಿದರೆ ಬೇಗನೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಬಹುದು. ಇನ್ನು ಸರ್ಕಾರ ಕೂಡ ವಸ್ತು ಪ್ರದರ್ಶನವನ್ನು ವರ್ಷಪೂರ್ತಿ ನಡೆಸಲು ದೃಢನಿಲುವು ತಳೆಯಬೇಕಿದೆ. ಮೈಸೂರಿನ ಖಾಸಗಿ ಶಾಲೆಗಳ ಆವರಣದಲ್ಲಿ ನಡೆಯುವ ಇತರೆ ವಸ್ತು ಪ್ರದರ್ಶನಕ್ಕೆ ತಡೆವೊಡ್ಡಿ ಸರ್ಕಾರದ್ದೆ ಜಾಗದಲ್ಲಿ ನಡೆಯುವಂತೆ ಮಾಡಿದ್ದಲ್ಲಿ ನಿರ್ದಿಷ್ಟ ಪ್ರದೇಶ ಇನ್ನಷ್ಟು ಪರಿಚಿತವಾಗುತ್ತದೆ ಹಾಗೂ ಸರ್ಕಾರಕ್ಕೂ ಆದಾಯ ಬರುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ