Mysore
29
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಓದುಗರ ಪತ್ರ | ಈ ಭಾಗ್ಯ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಏಕಿಲ್ಲ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಖಾಸಗೀಕರಣದ ಭಯದಲ್ಲಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ೧೧,೪೪೦ ಕೋಟಿ ರೂ. ಅನುದಾನ ನೀಡಿದೆ. ಇದೊಂದು ಶ್ಲಾಘನೀಯ ಕ್ರಮ.

ಆದರೆ, ಈ ಕ್ರಮ ಖಾಸಗೀಕರಣದ ಭಯದಲ್ಲಿರುವ ಕರ್ನಾಟಕದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ಕುರಿತಾಗಿ ಏಕಿಲ್ಲ? ವಿಪರ್ಯಾಸವೆಂದರೆ ಈ ಬಾರಿ ಕರ್ನಾಟಕದ ಎಚ್. ಡಿ. ಕುಮಾರಸ್ವಾಮಿ ಯವರೇ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದರೂ ಭದ್ರಾವತಿಯ ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗದಿರುವುದು ಆಶ್ಚರ್ಯಕರ ಸಂಗತಿ. ಕೇಂದ್ರ ಸರ್ಕಾರದ ಈ ಪಕ್ಷಪಾತ ನೀತಿಯನ್ನು ಸಚಿವ ಕುಮಾರಸ್ವಾಮಿಯವರು ಸಮರ್ಥಿಸಿಕೊಳ್ಳುತ್ತಾರೋ ಅಥವಾ ರಾಜ್ಯ ಸರ್ಕಾರವನ್ನು ದೂಷಿಸುತ್ತಾರೋ ತಿಳಿಯದು.

ಕೇಂದ್ರ ಸರ್ಕಾರವು ಕರ್ನಾಟಕದ ಬಗೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟೀಕೆಯನ್ನು ಲೇವಡಿ ಮಾಡುವವರು ಇದಕ್ಕೆ ಏನು ಹೇಳುತ್ತಾರೆ? -ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು

Tags: