ಬಿಬಿಎಂಪಿ ಈಗ ೫ ಪಾಲಿಕೆಗಳಾಗಿ ವಿಕೇಂದ್ರೀಕರಣವಾಗಿದೆ. ಇದನ್ನು ಈಗ ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ)ಎಂದು ಆಂಗ್ಲ ಭಾಷೆಯಲ್ಲಿ ನಾಮಕರಣ ಮಾಡಿದ್ದಾರೆ. ಇದನ್ನು ಬೃಹತ್ ಬೆಂಗಳೂರು ಪ್ರದೇಶ (ಬಿಬಿಎ) ಎಂದು ಕನ್ನಡದಲ್ಲಿ ಹೆಸರನ್ನು ಇಡಬಹುದಿತ್ತಲ್ಲವೇ? ಯಾಕೆ ಈ ಆಂಗ್ಲ ಮೋಹ? ಅಥವಾ ಬೃಹತ್ ಬೆಂಗಳೂರು ಪ್ರಾಧಿಕಾರ(ಬಿಬಿಎ)ಎಂದು ಕರೆಯಬಹುದಿತ್ತಲ್ಲವೇ? ಸರ್ಕಾರ ಇನ್ನಾದರೂ ಆಂಗ್ಲ ಭಾಷೆ ಮೇಲಿನ ಮೋಹವನ್ನು ಬಿಡಲಿ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





