Mysore
22
broken clouds

Social Media

ಬುಧವಾರ, 08 ಏಪ್ರಿಲ 2026
Light
Dark

ಓದುಗರ ಪತ್ರ | ಕಸ ವಿಂಗಡಣೆ ಕ್ರಮ ಸ್ವಾಗತಾರ್ಹ

ಓದುಗರ ಪತ್ರ

ಮೈಸೂರಿನ ಎಲ್ಲ ವಾರ್ಡ್‌ಗಳಲ್ಲೂ ಮಹಾನಗರ ಪಾಲಿಕೆಯಿಂದ ಕಸ ವಿಂಗಡಣೆಯನ್ನು ಮೂಲದಿಂದಲೇ ಅಂದರೆ ಮನೆಮನೆಗಳಲ್ಲೇ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಣೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ.

ಪಾಲಿಕೆಯ ಸಿಬ್ಬಂದಿ, ಪೌರ ಕಾರ್ಮಿಕರ ಜೊತೆಗೂಡಿ ಪ್ರತಿಯೊಂದೂ ವಾರ್ಡ್‌ನ ಮನೆ ಮನೆಗೆ ತೆರಳಿ ಜನರಿಗೆ ಹಸಿ ಕಸ ಮತ್ತು ಒಣ ಕಸ ವಿಂಗಡನೆಯ ಬಗ್ಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಅದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತಿದ್ದಾರೆ.

ಸಾರ್ವಜನಿಕರು ತಮ್ಮ ಮನೆಯಲ್ಲೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ ಮೈಸೂರು ನಗರವನ್ನು ಸ್ವಚ್ಛ ನಗರಿ ಆಗಲು ಸಹಕರಿಸಬೇಕು. -ಎಂ. ಕೆ. ಕಿರಣ್, ಟೆಲಿಕಾಂ ಕಾಲೋನಿ, ಉದಯಗಿರಿ , ಮೈಸೂರು

Tags:
error: Content is protected !!