Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್‌ ಹಿಂಪಡೆದ ಕೋರ್ಟ್‌

Inquiry Ordered Against Hunsur BEO

ಮೈಸೂರು: ಮೈಸೂರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ (ಜಯರಾಮು ಆರ್‌ ವಿರುದ್ಧ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ ಮಹತ್ವದ ಆದೇಶ ಹೊರಬಂದಿದೆ.

ನ್ಯಾಯಾಲಯವು ಮೂಲ ತೀರ್ಪನ್ನು ಪರಿಶೀಲಿಸಿದ ಬಳಿಕ ಎಕ್ಸ್‌ಕ್ಯೂಷನ್‌ ಅರ್ಜಿಯಲ್ಲಿ ಕೇಳಿರುವ ಪರಿಹಾರವು ತೀರ್ಪಿನೊಂದಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಬಂಧನ ನೋಟಿಸ್‌ ಜಾರಿಗೊಳಿಸಲು ಯಾವುದೇ ಆಧಾರ ಇಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಜಡಿಆರ್‌ ನಂಬರ್.‌2 ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಮಾನ್ಯಗೊಳಿಸಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರ ವಿರುದ್ಧ ಹೊರಡಿಸಿದ್ದ ಬಂಧನ ನೋಟಿಸ್‌ ಅನ್ನು ಹಿಂಪಡೆಯುವಂತೆ ಆದೇಶ ಹೊರಡಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್.‌22ರಂದು ನಡೆಯಲಿದೆ.

Tags:
error: Content is protected !!