Light
Dark

ಸೌರಜ್ವಾಲೆಯಿಂದ ಭೂಮಿಗೆ ಅಪ್ಪಳಿಸುವ ಭೂಕಾಂತೀಯ ಚಂಡಮಾರುತ!

ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಭೂಮಿಗೆ ಕೆಡವಬಲ್ಲವು

 ಕಾರ್ತಿಕ್ ಕೃಷ್ಣ.

ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಮತ್ತೆ ಭೂಮಿಗೆ ಕೆಡವಬಲ್ಲದು ಎಂದು ‘ಲೈವ್ ಸೈನ್ಸ್’ ಹಿಂದೆ ವರದಿ ಮಾಡಿತ್ತು. ಹಾಗೆಯೆ ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ಅಂತರ್ಜಾಲವನ್ನು ದುರ್ಬಲಗೊಳಿಸಬಹುದು ಎಂದೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಚಂಡಮಾರುತವು ಸೂರ್ಯನು ತನ್ನ ಸರಿಸುಮಾರು 11- ವರ್ಷ- ಉದ್ದದ ಸೌರ ಚಕ್ರದ ಅತ್ಯಂತ ಸಕ್ರಿಯ ಹಂತಕ್ಕೆ ಏರಿದಾಗ ಉಂಟಾಗುತ್ತದೆಯಂತೆ.

ಬಾಹ್ಯಾಕಾಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಅದು ಮತ್ತಷ್ಟು ನಿಗೂಢವಾಗುತ್ತಾ ಹೋಗುತ್ತದೆ. ಸದಾ ಚಟುವಟಿಕೆಯಲ್ಲಿರುವ ಕೇಂದ್ರವದು. ನಕ್ಷತ್ರಗಳ ಹುಟ್ಟು- ಸಾವು, ಆಕಾಶಕಾಯಗಳು ಹಾದುಹೋಗುವುದು, ದುತ್ತೆಂದು ಗೋಚರವಾಗುವ ಕಪ್ಪು ರಂಧ್ರಗಳು – ಹೀಗೆ ಬಾಹ್ಯಾಕಾಶದಲ್ಲಿ ವಿದ್ಯಮಾನಗಳು ನಿರಂತರವಾಗಿ ಜರುಗುತ್ತಲೇ ಇರುತ್ತವೆ. ನಮ್ಮ ಸೌರವ್ಯೆಹವೂ ಇಂತಹ ಚಟುವಟಿಕೆಯಲ್ಲಿ ಹಿಂದುಳಿದಿಲ್ಲ. ಸೌರ ಜ್ವಾಲೆ, ಸೌರ ಬಿರುಗಾಳಿ ಹೀಗೆ ಸೂರ್ಯನೂ ಕೂಡ ಕಾರ್ಯೋನ್ಮುಖನಾಗಿರುತ್ತಾನೆ.

ಸೂರ್ಯನಲ್ಲಿ ಜರುಗುವ ಮತ್ತೊಂದು ಕುತೂಹಲಕಾರಿ ಕ್ರಿಯೆಯೊಂದಿದೆ. ‘ಕರೋನಲ್ ಮಾಸ್ ಎಜೆಕ್ಷನ್’ ಎಂದು ಅದರ ಹೆಸರು.

ಸೂರ್ಯನ ಹೊಳಪುಗೋಳದಿಂದ ಪ್ಲಾಸ್ಮ ಹಾಗು ಕಾಂತಕ್ಷೇತ್ರವು ಜೊತೆಗೂಡಿ ಸೂರ್ಯಗೋಳಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆಯನ್ನು ಕರೋನಲ್ ಮಾಸ್ ಎಜೆಕ್ಷನ್ (ಇಉ) ಎಂದು ಕರೆಯುತ್ತಾರೆ. ಇಉಗಳು ಸಾಮಾನ್ಯವಾಗಿ ಸೌರ ಜ್ವಾಲೆಗಳು ಹಾಗು ಇತರ ಸೌರ ಚಟುವಟಿಕೆಯ ಸ್ವರೂಪಗಳೊಂದಿಗೆ ನಿಕಟ ಸಂಬಂಧ ಹೊಂದಿವೆಯಾದರೂ ಈ ಸಂಬಂಧವನ್ನು ಅಂಗೀಕರಿಸಲು ಬೇಕಾದ ಸೈದ್ಧಾಂತಿಕ ಪುರಾವೆ ಇನ್ನೂ ದೊರೆತಿಲ್ಲ.

ಈ ಭಾನುವಾರ ಸೂರ್ಯನಲ್ಲಿ ಡಾರ್ಕ್ ಪ್ಲಾಸ್ಮಾ ಸ್ಫೋಟ ವೊಂದು ಜರುಗಿದ್ದನ್ನು ಸೌರ ವೀಕ್ಷಕರು ಗಮನಿಸಿದ್ದಾರೆ.

ಸೂರ್ಯನಿಂದ ಘಂಟೆಗೆ ೨.೧ ಮಿಲಿಯನ್ ಕಿಮೀ ವೇಗದಲ್ಲಿ ಹೊರಹೊಮ್ಮಿದ ಈ ಡಾರ್ಕ್ ಪ್ಲಾಸ್ಮಾ ಅಕ್ಷರಶಃ ನರಭಕ್ಷಕನ ರೂಪದಲ್ಲಿ ಭೂಮಿಯನ್ನು ಸವರಿಕೊಂಡು ಈ ಗುರುವಾರ ಸಾಗಲಿದೆಯಂತೆ. ಇvಗಳು ಸೂರ್ಯನನ್ನು ದಾಟಿ ತನ್ನ ಗ್ರಹಗಳ ವಲಯವನ್ನು ಪ್ರವೇಶಿಸಿದರೆ, ಅದನ್ನು ಇಂಟರ್ಪ್ಲಾನೆಟರಿ ಕರೋನಲ್ ಮಾಸ್ ಎಜೆಕ್ಷನ್ (ಐಇಉ) ಎಂದು ಕರೆಯುತ್ತಾರೆ. ಐಇಉಗಳು ಭೂಮಿಯ ಕಾಂತಗೋಳವನ್ನು ತಲುಪುವಷ್ಟು ಸಮರ್ಥವಾಗಿವೆ. ಇದರಿಂದ ಭೂಕಾಂತೀಯ ಬಿರುಗಾಳಿಗಳು, ಅರೋರಾಗಳು ಉಧ್ಭವಿಸುತ್ತವೆ ಹಾಗು ಇವುಗಳು ಅಪರೂಪದ ಸಂದರ್ಭಗಳಲ್ಲಿ ವಿದ್ಯುತ್ ಶಕ್ತಿ ಗ್ರಿಡ್‌ಗಳಿಗೆ ಹಾನಿಯುಂಟುಮಾಡುತ್ತವೆ.

ಸನ್‌ಸ್ಪಾಟ್‌ಗಳು ಸೂರ್ಯನ ಮೇಲ್ಮೈಯಲ್ಲಿರುವ ಪ್ರದೇಶಗಳಾಗಿದ್ದು, ಅಲ್ಲಿ ವಿದ್ಯುದಾವೇಶದ ಹರಿವಿನಿಂದ ರಚಿಸಲ್ಪಟ್ಟ ಶಕ್ತಿಯುತ ಕಾಂತೀಯ ಕ್ಷೇತ್ರಗಳಿರುತ್ತವೆ. ಇವುಗಳು ಒಂದಕ್ಕೊಂದು ಹಗ್ಗದಂತೆ ಬೆಸೆದುಕೊಂಡು ಗಂಟುಕಟ್ಟಿಕೊಂಡಿರುತ್ತವೆ. ವಿದ್ಯುದಾವೇಶದ ಓಡಾಟ ಹೆಚ್ಚಾದಾಗ ಇದು ಚಟ್ಟನೆ ಮುರಿದು ಅಗಾಧ ಪ್ರಮಾಣದಲ್ಲಿ ಶಕ್ತಿಯು ಹೊರಹೊಮ್ಮುವುದನ್ನು ‘ಸೌರ ಜ್ವಾಲೆ’ ಅಥವಾ ಕರೋನಲ್ ಮಾಸ ಎಜೆಕ್ಷನ್ಸ್ (ಇಉ) ಎನ್ನುತ್ತಾರೆ.

ವೇಗವಾಗಿ ಚಲಿಸುವ ಸೌರ ಸ್ಫೋಟವು ಬಾಹ್ಯಾಕಾಶದ ಅದೇ ಪ್ರದೇಶದಿಂದ ಹೊಮ್ಮಿದ ಮುಂಚಿನ ಸ್ಫೋಟವನ್ನು ಹಿಂದಿಕ್ಕಿ ಅದನ್ನು ಕಬಳಿಸಿದಾಗ ನರಭಕ್ಷಕ ಇಉಗಳು ಸಂಭವಿಸುತ್ತವೆ. ತನ್ನಂತೆಯೇ ಇರುವ ಇನ್ನೊಂದು ಇಉಯನ್ನು ಕಬಳಿಸಿವುದರಿಂದ ಪ್ರಬಲ ಇಉಯನ್ನು ನರಭಕ್ಷಕ ಅಥವಾ ್ಚಚ್ಞ್ಞಜಿಚಿಚ್ಝ ್ಚಟ್ಟಟ್ಞಚ್ಝ ಞ ಛ್ಜಿಛ್ಚಿಠಿಜಿಟ್ಞ ಎಂದು ಉಲ್ಲೇಖಿಸುತ್ತಾರೆ.

ತಮ್ಮದೇ ಆದಂತಹ ಬಲವಾದ ಕಾಂತೀಯ ಕ್ಷೇತ್ರಗಳನ್ನು ಹೊಂದಿರುವ ಗ್ರಹಗಳು ಇಉಗಳಿಂದ ಸೌರ ಅವಶೇಷಗಳ ಚಿಚ್ಟ್ಟಜಛಿ ಗಳನ್ನು ಹೀರಿಕೊಳ್ಳುವಾಗ ಭೂಕಾಂತೀಯ ಬಿರುಗಾಳಿಗಳು ಸಂಭವಿಸುತ್ತವೆ.

ಈ ಚಂಡಮಾರುತಗಳು ಅಪ್ಪಳಿಸಿದಾಗ, ಭೂಮಿಯ ಕಾಂತೀಯ ಕ್ಷೇತ್ರವು ಹೆಚ್ಚು ಶಕ್ತಿಯುತ ಕಣಗಳ ಅಲೆಗಳಿಂದ ಸಂಕುಚಿತಗೊಳ್ಳುತ್ತದೆ. ಈ ಕಣಗಳು ಧ್ರುವಗಳ ಸಮೀಪವಿರುವ ಕಾಂತಕ್ಷೇತ್ರದ ರೇಖೆಗಳ ಶಕ್ತಿಯನ್ನು ಕಡಿಮೆಗೊಳಿಸಿ ವಾತಾವರಣದಲ್ಲಿನ ಅಣುಗಳನ್ನು ಪ್ರಚೋದಿಸುತ್ತವೆ ಹಾಗೂ ವರ್ಣರಂಜಿತ ಅರೋರಾಗಳ ಸೃಷ್ಟಿಗೆ ಬೇಕಾದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಬಿಡುಗಡೆ ಮಾಡುತ್ತವೆ. ಭೂಕಾಂತೀಯ ಬಿರುಗಾಳಿಗಳನ್ನು ಅವುಗಳ ತೀವ್ರತೆಗೆ ಅನುಗುಣವಾಗಿ ಎ೧ ರಿಂದ ಎ೫ ವರೆಗೆ ವರ್ಗೀಕರಿಸಲಾಗಿದೆ. ಸದ್ಯದ ್ಚಚ್ಞ್ಞಜಿಚಿಚ್ಝ ಇಉ ಸೃಷ್ಟಿಸಿರುವುದು ಎ೩ ಚಂಡಮಾರುತವನ್ನ. ಬೇರೆ ವರ್ಗಗಳಿಗೆ ಹೋಲಿಸಿದರೆ ಇದೇ ಪ್ರಬಲವಾದ ಭೂಕಾಂತೀಯ ಬಿರುಗಾಳಿಗಳಾಗಿವೆ. ಎ೩ ಚಂಡಮಾರುತಗಳು ಕಡಿಮೆ- ಆವರ್ತನ ಮತ್ತು ಉಪಗ್ರಹ ಸಂಚರಣೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಳ ಕಕ್ಷೆಯ ಉಪಗ್ರಹಗಳ ಮೇಲೆ ಹೆಚ್ಚಿದ ಎಳೆತ ಹಿಗ್ಗಬಹುದು ಹಾಗೂ ಅವುಗಳ ವೋಲ್ಟೇಜನ್ನು ಸರಿಪಡಿಸಲು ಕೆಲವು ಪರ್ವ ಸಿಸ್ಟಮ್‌ಗಳು ಬೇಕಾಗಬಹುದು ಎಂದು ಖಚ್ಚಛಿ ಛಿಠಿಛ್ಟಿ ಕ್ಟೃಛಿಜ್ಚಿಠಿಜಿಟ್ಞ ಇಛ್ಞಿಠಿಛ್ಟಿ (ಖಇ )ವರದಿ ಮಾಡಿದೆ.

 

ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಮತ್ತೆ ಭೂಮಿಗೆ ಕೆಡವಬಲ್ಲದು ಎಂದು ‘ಲೈವ್ ಸೈನ್ಸ್’ ಹಿಂದೆ ವರದಿ ಮಾಡಿತ್ತು. ಹಾಗೆಯೆ ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ಅಂತರ್ಜಾಲವನ್ನು ದುರ್ಬಲಗೊಳಿಸಬಹುದು ಎಂದೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಚಂಡಮಾರುತವು ಸೂರ್ಯನು ತನ್ನ ಸರಿಸುಮಾರು ೧೧- ವರ್ಷ- ಉದ್ದದ ಸೌರ ಚಕ್ರದ ಅತ್ಯಂತ ಸಕ್ರಿಯ ಹಂತಕ್ಕೆ ಏರಿದಾಗ ಉಂಟಾಗುತ್ತದೆಯಂತೆ. ಸೌರ ಚಟುವಟಿಕೆಯು ಒಂದು ನಿರ್ಧಿಷ್ಟ ಅವಧಿಯಲ್ಲಿ ಬದಲಾಗುತ್ತಿರುತ್ತದೆಯೆಂದು ಖಗೋಳಶಾಸ್ತ್ರಜ್ಞರು ೧೭೭೫ರಿಂದ ತಿಳಿದಿದ್ದಾರೆ. ಆದರೆ ಇತ್ತೀಚೆಗೆ, ಸೂರ್ಯನು ನಿರೀಕ್ಷೆಗಿಂತ ಹೆಚ್ಚು ಸಕ್ರಿಯವಾಗಿದ್ದು ಸೌರಕಲೆಯು ಸುಮಾರು ಎರಡು ಪಟ್ಟು ಹೆಚ್ಚಾಗಿ ಕಾಣಿಸಿಕೊಂಡಿದೆ. ಮುಂದಿನ ಕೆಲವು ವರ್ಷಗಳವರೆಗೆ ಸೂರ್ಯನ ಚಟುವಟಿಕೆಯು ಸ್ಥಿರವಾಗಿ ಏರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಚಟುವಟಿಕೆಗಳು ಕಡಿಮೆಯಾಗುವ ಮೊದಲು ೨೦೨೫ ರಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆಯಂತೆ.

ಸಮಕಾಲೀನ ಇತಿಹಾಸದಲ್ಲಿ ಇದುವರೆಗೆ ಕಂಡ ಅತಿದೊಡ್ಡ ಸೌರ ಚಂಡಮಾರುತವು ೧೮೫೯ರ ಕ್ಯಾರಿಂಗ್ಟನ್ ಘಟನೆಯಾಗಿದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಅದು ಸುಮಾರು ೧೦ ಶತಕೋಟಿ ೧- ಮೆಗಾಟನ್ ಪರಮಾಣು ಬಾಂಬುಗಳ ಶಕ್ತಿಯನ್ನು ಬಿಡುಗಡೆ ಮಾಡಿತ್ತಂತೆ. ಭೂಮಿಗೆ ಅಪ್ಪಳಿಸಿದ ನಂತರ, ಸೌರ ಕಣಗಳ ಶಕ್ತಿಯುತ ಸ್ಟ್ರೀಮ್ ಪ್ರಪಂಚದಾದ್ಯಂತ ಟೆಲಿಗ್ರಾಫ್ ವ್ಯವಸ್ಥೆಗಳನ್ನು ಕಡಿದುಹಾಕಿ, ಹುಣ್ಣಿಮೆಯ ಬೆಳಕಿಗಿಂತ ಪ್ರಕಾಶಮಾನವಾಗಿ ಅರೋರಾಗಳು ಗೋಚರಿಸುವಂತೆ ಮಾಡಿತು. ಇಂದು ಇದೇ ರೀತಿಯ ಘಟನೆಯು ಸಂಭವಿಸಿದರೆ, ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಷ್ಟು ಹಾನಿಯನ್ನುಂಟು ಮಾಡಬಲ್ಲದು ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ