ಭಾರತೀಯ ರಿಸರ್ವ್ ಬ್ಯಾಂಕ್‌ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯು ಆಗಸ್ಟ್ ೩-೫ರ ನಡುವೆ ನಡೆಯಲಿದೆ. ಏರು ಹಾದಿಯಲ್ಲಿರುವ ಹಣದುಬ್ಬರ ನಿಯಂತ್ರಿಸಲು ರೆಪೊದರವನ್ನು ೨೫ರಿಂದ ೩೫ ಅಂಶಗಳಷ್ಟು ಏರಿಕೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿವೆ.