ಭಾರತದಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಶೇ.೧೧ ರಷ್ಟು ಜಾಸ್ತಿಯಾಗಿದೆ. ಆದರೆ, ಮಳೆ ವಿತರಣೆ ಸಮನಾಗಿ ಆಗಿಲ್ಲ. ಅಸಮರ್ಪಕ ಮಳೆ ವಿತರಣೆಯಿಂದ ಪ್ರಸಕ್ತ ಹಂಗಾಮಿನಲ್ಲಿ ಆಹಾರ ಧಾನ್ಯ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣದುಬ್ಬರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ನೊಮುರಾ ತಿಳಿಸಿದೆ.