Mysore
24
overcast clouds

Social Media

ಭಾನುವಾರ, 21 ಜೂನ್ 2026
Light
Dark

ಯೂಟ್ಯೂಬ್ ಕಥಾ ಸ್ಪರ್ಧೆ ವಿಜೇತೆಗೆ ಸನ್ಮಾನ

ಗುಂಡ್ಲುಪೇಟೆ: ಕರುನಾಡು ಯುವಶಕ್ತಿ ಸಂಘಟನೆಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂಟ್ಯೂಬ್ ಕಥಾ ಸ್ಪರ್ಧೆ ವಿಜೇತೆ ಯಾಸ್ಮೀನ್ ಬಾನು ಅವರನ್ನು ಸನ್ಮಾನಿಸಲಾಯಿತು.

ಗುಂಡ್ಲುಪೇಟೆ ಪಟ್ಟಣದ ಹೆಚ್.ಎಸ್.ಮಹದೇವ ಪ್ರಸಾದ್ ಪ್ರಸಾದ್ ನಗರದ ನಿವಾಸಿಯಾದ ಎ.ಅಬ್ದುಲ್ ಮಾಲಿಕ್‌ರವರ ಪುತ್ರಿ ಯಾಸ್ಮೀನ್ ಬಾನುರವರು ರಾಷ್ಟ್ರ ಮಟ್ಟದ ಎಪಿಜೆ ಅಬ್ದುಲ್ ಕಲಾಂ ರವರ ಕುರಿತು ರಾಷ್ಟ್ರ ಮಟ್ಟದ ಯೂಟ್ಯೂಬ್ ಕಥಾ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಇವರಿಗೆ ಯುವಶಕ್ತಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಮುನೀರ್ ಪಾಷ ಅವರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಳಿಂಗಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್, ಯುವಶಕ್ತಿ ಸಂಘಟನೆ ಗೌರವಾಧ್ಯಕ್ಷರಾದ ರಹಮತ್ ಉಲ್ಲಾಖಾನ್, ಕಾಲೇಜಿನ ಪ್ರಾಂಶುಪಾಲರಾದ ಚಾಮರಾಜು, ದೇವರಾಜು, ಶಾಲಿನಿ, ಕಾಲೇಜಿನ ಸಿಬ್ಬಂದಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!