Mysore
21
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಓದುಗರ ಪತ್ರ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.

ಆರಂಭಿಕ ಹಂತದಲ್ಲಿ ರೂಪಾಯಿ ೧೦ ಮತ್ತು ೨೦ ಮುಖಬೆಲೆಯ ತಲಾ ೧೦೦ ಕೋಟಿ ನೋಟುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.ಸಾಮಾನ್ಯ ಕಾಗದದ ನೋಟುಗಳಿಗಿಂತ ಇವು ೪ ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ. ಕೈಯಿಂದ ಕೈಗೆ ಚಲಾವಣೆಯಾಗುವಾಗ ಇವು ಬೇಗನೆ ಹರಿಯುವುದಿಲ್ಲ, ನೀರಿನಲ್ಲಿ ನೆನೆಯುವುದಿಲ್ಲ ಹಾಗೂ ಇವುಗಳನ್ನು ನಕಲಿ ಮಾಡುವುದು ಅತ್ಯಂತ ಕಷ್ಟಕರ. ದಿನನಿತ್ಯದ ಸಣ್ಣ ಮೌಲ್ಯದ ವಹಿವಾಟುಗಳಲ್ಲಿ ಹರಿದ ನೋಟುಗಳ ಕಿರಿಕಿರಿಯನ್ನು ತಪ್ಪಿಸಲು ಇದು ಸಹಕಾರಿ. ಜೊತೆಗೆ ನೋಟುಗಳನ್ನು ಪದೇ ಪದೇ ಮರುಮುದ್ರಿಸುವ ಆರ್‌ಬಿಐ ವೆಚ್ಚ ಗಣನೀಯವಾಗಿ ತಗ್ಗಲಿದ್ದು, ದೇಶದ ಆರ್ಥಿಕತೆಗೆ ದೊಡ್ಡ ಬಲ ತರಲಿದೆ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!