Mysore
24
overcast clouds

Social Media

ಶನಿವಾರ, 05 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ಓದುಗರ ಪತ್ರ

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸಿ ಮತ ಪಡೆದು ಈಗ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡದಿರುವುದು ಎಷ್ಟು ಸರಿ?

ಮಹಿಳೆಯರ ವೋಟ್ ಬೇಕು, ಆದರೆ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಬೇಡ್ವಾ? ‘ಸ್ತ್ರೀಯರಿಗೆ ಸಮಾನತೆ’ ನೀಡುತ್ತೇವೆ ಎಂದು ದೊಡ್ಡ ದೊಡ್ಡ ಭಾಷಣ ಮಾಡ್ತಾರೆ. ಎಲ್ಲಿದೆ ಸಮಾನತೆ? ಎಲ್ಲಿದೆ ನ್ಯಾಯ? ಸಾಮಾಜಿಕ ಸಮಾನತೆ ಬರೀ ಮಾತಿಗೆ ಮಾತ್ರ ಸೀಮಿತನಾ? ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮಾನತೆ ನೀಡದಿದ್ದರೆ ಅದು ಪ್ರಜಪ್ರಭುತ್ವ ವೀರೋಧಿ ನೀತಿ. ಸೀಯರು ಇಲ್ಲದ ಸಂಪುಟ ಅಪೂರ್ಣ. ಇದರ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುರ್ತು ಗಮನಹರಿಸಬೇಕಾಗಿದೆ.

-ನಬಿ ಆರ್.ಬಿ.ದೋಟಿಹಾಳ, ಕೊಪ್ಪಳ ಜಿಲ್ಲೆ

 

Tags:
error: Content is protected !!