ಮೈಸೂರು : ನಗರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದ KSRTC ಬಸ್ ನ ವೀಲ್ ಗಳು ಕಳಚಿಬಿದ್ದು ಪ್ರಯಾಣಿಕರಲ್ಲಿ ಕೆಲಕಾಲ ಆತಂಕವನ್ನುಂಟು ಮಾಡಿದ ಘಟನೆ ಹುಣಸೂರು ಮಾರ್ಗ ರಸ್ತೆಯ ಯಶೋದಪುರದ ಬಳಿ ನಡೆದಿದೆ.
ಮೈಸೂರಿನಿಂದ ಸೋಮವಾರ ಪೇಟೆಗೆ ತೆರಳುತ್ತಿದ್ದ KA 09 F 5330 ನೊಂದಣಿ ಸಂಖ್ಯೆಯ ಬಸ್. ಇದಾಗಿದ್ದು ಹಿಂದಿನ ಚಕ್ರಗಳು ಹಂಪ್ ಬಳಿ ಸಾಗುತ್ತಿದ್ದ ವೇಳೆ ಕಳಚಿ ಬಿದ್ದ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.