ಮೈಸೂರು : ಮೈಸೂರಿನ ಹೊರವಲಯದಲ್ಲಿ ಮತ್ತೆ ಹುಲಿ ಪ್ರತ್ಯಕ್ಷವಾಗಿದ್ದು ಅರಣ್ಯಾಧಿಕಾರಿಗಳು ಕೂಡಲೇ ಅಲರ್ಟ್ ಆಗಿದ್ದಾರೆ. ಮೈಸೂರು-ನಂಜನಗೂಡು ನಡುವೆ ದಡದಹಳ್ಳಿ ಗ್ರಾಮದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮೈಸೂರಿನ ದಡದಹಳ್ಳಿಯ ತೋಟದ ಮನೆಯೊಂದರ ಸಮೀಪ ಹುಲಿ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು, ಚಿರತೆ ಕಾರ್ಯಪಡೆ ಹುಲಿ ಕಾಣಿಸಿಕೊಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಗ್ರಾಮದ ಸುತ್ತಾ ಮುತ್ತಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಗ್ರಾಮದ ಸುತ್ತ ಹುಲಿ ಚಲನಚಿತ್ರದ ನೆಟ್ವರ್ಕ್ ಅಳವಡಿಸಿದ್ದು, ಐಆರ್ ಕ್ಯಾಮೆರಾ ಹಾಗೂ ಹುಲಿಯ ಸೆರೆಗೆ ಬೋನು ಇಡಲಾಗಿದೆ. ಹಾಗೆಯೇ ಹುಲಿ ಕಾಣಿಸಿಕೊಂಡಲ್ಲಿ ಸಹಾಯವಾಣಿ 1926ಗೆ ಕರೆ ಮಾಡಿ ಎಂದು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.
ಹುಲಿ ಬಗ್ಗೆ ಯಾರು ಸುಳ್ಳು ಮಾಹಿತಿಗಹಳನ್ನು ನೀಡದೇ ಹುಲಿ ಸೆರೆಗೆ ಸಹಾಯ ಮಾಡಬೇಕು ಎಂದು ಮೈಸೂರು ಅರಣ್ಯಾಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.