Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಹುಲಿ ಜತೆ ಹೋರಾಡಿ ಮರಿಗಳನ್ನು ರಕ್ಷಿಸಿದ ಕರಡಿ

ಅಂತರಸಂತೆ : ಮರಿಗಳ ರಕ್ಷಣೆಗಾಗಿ ತಾಯಿ ಕರಡಿಯೊಂದು ಹುಲಿಯೊಂದಿಗೆ ಹೋರಾಡಿದ ಅಪರೂಪದ ಘಟನೆಯೊಂದು ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ನಾಣಂಚಿ ಗೇಟ್ (ಕುಟ್ಟ)ದಿಂದ ಹೊರಟ ಶನಿವಾರ ಸಂಜೆಯ ಸಫಾರಿಯ ವೇಳೆ ಕಂಡುಬಂದಿದೆ.
ನಾಗರಹೊಳೆ ಉದ್ಯಾನವನದ ನಾಣಂಚಿ ಗೇಟ್‌ನಿಂದ ಸಂಜೆಯ ಸಫಾರಿಗೆ ತೆರಳಿದ್ದವರಿಗೆ ಈ ದೃಶ್ಯಕಂಡು ಬಂದಿದ್ದು, ಕರಡಿಯೊಂದು ತನ್ನ ಎರಡು ಮರಿಗಳೊಂದಿಗೆ ತೆರಳುತಿದ್ದ ವೇಳೆ ಹುಲಿಯೊಂದು ಮರಿಗಳ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ತಾಯಿ ಕರಡಿಯೂ ಹುಲಿಯೊಂದಿಗೆ ಕಾದಾಡಿ ಹುಲಿಯನ್ನು ಓಡಿಸುವ ಮೂಲಕ ಮರಿಗಳನ್ನು ರಕ್ಷಿಸಿದೆ.

ಸಧ್ಯ ಈ ಅಪರೂಪದ ದೃಶ್ಯ ಸಫಾರಿಗೆ ತೆರಳಿದ ಪ್ರಸಾರಿಗೆ ಸಿಕ್ಕಿದ್ದು, ಕರಡಿ ಮತ್ತು ಹುಲಿ ನಡುವಿನ ಘರ್ಷಣೆ ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದುಕೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!