Mysore
28
overcast clouds

Social Media

ಬುಧವಾರ, 17 ಜೂನ್ 2026
Light
Dark

ಹನೂರು : RSS ವತಿಯಿಂದ ನಾಳೆ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭ

ಹನೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಚಾಮರಾಜನಗರ ಜಿಲ್ಲೆ ಪ್ರಾಥಮಿಕ ಶಿಕ್ಷಾವರ್ಗ 2022ರ ಸಾರ್ವಜನಿಕ ಸಮಾರೋಪ ಕಾರ್ಯಕ್ರಮ ಪಟ್ಟಣದ ಬಿ ಎಂ ಜಿ ಶಾಲೆಯಲ್ಲಿ ಜರುಗಲಿದೆ ಎಂದು ಶಿಬಿರ ಕಾರ್ಯವಾಹ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ವತಿಯಿಂದ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ತರಬೇತಿ ಕಾರ್ಯಕ್ರಮವು ಮುಗಿದಿದ್ದು ಅಕ್ಟೋಬರ್ 14 ರಂದು ಮಧ್ಯಾಹ್ನ 3 ಗಂಟೆಗೆ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಕಾರ್ಯಕ್ರಮವಿದ್ದು,5ಗಂಟೆಗೆ ಸಮಾರೋಪ ಶಿಬಿರ ಶಿಬಿರಾರ್ಥಿಗಳಿಂದ ಶಾರೀರಿಕ ಪ್ರದರ್ಶನವಿದ್ದು ಅಧ್ಯಕ್ಷತೆಯನ್ನು ಸ್ನೇಹ ನರ್ಸಿಂಗ್ ಹೋಂ ಮುಖ್ಯಸ್ಥರಾದ ಡಾ. ಮಂಜುನಾಥ್ ಸಿ ಹಾಗೂ ಬೌದ್ಧಿಕ ವನ್ನು ಮೈಸೂರು ವಿಭಾಗ ಪ್ರಚಾರ ಪ್ರಮುಖ ಶ್ರೀ ಮೋಹನ್ ರವರು ವಹಿಸಲಿದ್ದಾರೆ .ಆದ್ದರಿಂದ ಹನೂರು ಪಟ್ಟಣದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!