Mysore
26
overcast clouds

Social Media

ಭಾನುವಾರ, 10 ಮೇ 2026
Light
Dark

ನಜರ್‌ಬಾದ್ ಪೊಲೀಸ್ ಠಾಣೆಯಿಂದ ಹಾಲಿನ ಡೈರಿ ತನಕ ದುರಸ್ತಿ : 1.50 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ

ಮೈಸೂರು: ಹಲವು ತಿಂಗಳಿಂದ ಸವಾರರು,ವಾಹನಗಳಿಗೆ ತ್ರಾಸದಾಯಕವಾಗಿದ್ದ ಮಹದೇಶ್ವರ ರಸ್ತೆ ಡಾಂಬರೀಕರಣಕ್ಕೆ ಮಹಾಪೌರ ಶಿವಕುಮಾರ್ ಗುರುವಾರ ಚಾಲನೆ ನೀಡಿದರು. ಬಸವೇಶ್ವರ ಹಾಗೂ ಮಹದೇಶ್ವರ ದೇವಸ್ಥಾನದ ಮುಂಭಾಗ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ ಸತ್ಯರಾಜ್, ಛಾಯಾದೇವಿ ಅವರೊಂದಿಗೆ ಗುದ್ದಲಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ಕೊಟ್ಟರು. ಬಳಿಕ ಮಾತನಾಡಿದ ಮಹಾಪೌರ ಶಿವಕುಮಾರ್, ಒಂದು ವರ್ಷದಿಂದ ಈ ಮಾರ್ಗದ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಸ್ಥಳೀಯ ನಗರಪಾಲಿಕೆ ಸದಸ್ಯರು ಒತ್ತಡ ಹೇರಿದ್ದರು.ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದವು. ಕಳೆದ ಮೂರು ತಿಂಗಳಹಿಂದೆಯೇ ಕಾಮಗಾರಿ ಆರಂಭಿಸಲು ಕರೆದಿದ್ದ ಟೆಂಡರ್‌ಗೆ ಸಿಂಗಲ್ ವ್ಯಕ್ತಿ ಬಂದಿದ್ದರಿಂದ ಮರು ಟೆಂಡರ್ ಕರೆದಿದ್ದರಿಂದ ವಿಳಂಬವಾಗಿತ್ತು. ಇದೀಗ ೧.೫೦ ಕೋಟಿ ರೂ.ವೆಚ್ಚದಲ್ಲಿ ನಜರ್‌ಬಾದ್ ಪೊಲೀಸ್ ಠಾಣೆಯಿಂದ ಹಳೆಯ ಹಾಲಿನ ಡೈರಿ ತನಕ ರಸ್ತೆಗಳಲ್ಲಿ ಬಿದ್ದಿರುವ ಹಳ್ಳ,ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಗುತ್ತದೆ ಎಂದರು. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಮಹದೇಶ್ವರ ರಸ್ತೆಯು ಒಂದಾಗಿರುವ ಕಾರಣ ಎರಡು-ಮೂರು ವರ್ಷಗಳ ಬಾಳಿಕೆ ಬರುವಂತೆ ಕಾಮಗಾರಿ ಮಾಡಲಾಗುತ್ತದೆ. ಎರಡು ಬದಿಯಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಡಾಂಬರೀಕರಣ ಮಾಡುತ್ತೇವೆ ಎಂದು ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ನಗರದ ಸಿದ್ದಾರ್ಥನಗರ, ಡಾ.ರಾಜ್‌ಕುಮಾರ್ ರಸ್ತೆ ಮೊದಲಾದ ಕಡೆಗಳಲ್ಲಿ ನಡೆಯುತ್ತಿರುವ ಟ್ಯಾಂಕ್, ರಸ್ತೆ ಕಾಮಗಾರಿ, ಡ್ರೈನೇಜ್ ಕಾಮಗಾರಿ,ಯುಜಿಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳನ್ನು ಮಹಾಪೌರರು ಪರಿಶೀಲಿಸಿದರು.ಸದಸ್ಯರು,ಅಧಿಕಾರಿಗಳ ತಂಡದೊಂದಿಗೆ ವಿವಿಧ ಕಡೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು. ಉಪ ಮಹಾಪೌರರಾದ ಡಾ.ಜಿ.ರೂಪಾ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಧೀಕ್ಷಕ ಅಭಿಯಂತರ ಮಹೇಶ್,ಕಾರ್ಯಪಾಲಕ ಅಭಿಯಂತರ ರಂಜಿತ್‌ಕುಮಾರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಸುವರ್ಣ, ವಲಯ ಕಚೇರಿ ಒಂಬತ್ತರ ಅಭಿವೃದ್ಧಿ ಅಧಿಕಾರಿ ಸಿ.ಹರ್ಷಿಯಾ ಹಾಜರಿದ್ದರು.

ಮೈಸೂರಿನ ನಜರ್‌ಬಾದ್‌ನಿಂದ ಹಾಲಿನ ಡೈರಿಯವರೆಗೆ ರಸ್ತೆ ಡಾಂಬರೀಕರಣಕ್ಕೆ ಮಹಾಪೌರ ಶಿವಕುಮಾರ್ ಗುದ್ದಲಿಪೂಜೆ ನೆರವೇರಿಸಿದರು. ಉಪ ಮಹಾಪೌರರಾದ ಡಾ.ಜಿ.ರೂಪಾ, ಸದಸ್ಯರಾದ ಸತ್ಯರಾಜ್, ಛಾಯಾದೇವಿ,ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಭಿವೃದ್ಧಿ ಅಧಿಕಾರಿ ಸಿ.ಹರ್ಷಿಯಾ,ಅಧೀಕ್ಷಕ ಅಭಿಯಂತರ ಮಹೇಶ್,ಕಾರ್ಯಪಾಲಕ ಅಭಿಯಂತರ ರಂಜಿತ್‌ಕುಮಾರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಸುವರ್ಣ ಇನ್ನಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!