Mysore
21
broken clouds

Social Media

ಭಾನುವಾರ, 14 ಜೂನ್ 2026
Light
Dark

ನಾಳೆ ಬಿರ್ಸಾ ಮುಂಡ ಜಯಂತಿ ಮತ್ತು ಪ್ರತಿಭಟನೆ

ಚಾಮರಾಜನಗರ: ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ದಿ ಸಂಘದಿಂದ ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ೧೪೮ನೇ ಜಯಂತಿಯನ್ನು  ಇಲ್ಲಿನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನ.೧೫ರಂದು ಹಮ್ಮಿಕೊಳ್ಳಲಾಗಿದೆ.
ಅರಣ್ಯವಾಸಿಗಳಿಗೆ ಒಳಮೀಸಲಾತಿ ನೀಡಬೇಕು, ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಯೋಜನೆಗಾಗಿ ಮಾಡಬಾರದು ಎಂದು ಒತ್ತಾಯಿಸಿ ಇದೇವೇಳೆ ಚಾಮರಾಜೇಶ್ವರ ಉದ್ಯಾನದಿಂದ ಜಿಲ್ಲಾಡಳಿತ ಭವನದತನಕ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಸಂಘದ ಜಿಲ್ಲಾ ಅಧ್ಯಕ್ಷೆ ಮಾದಮ್ಮ, ಕಾರ್ಯದರ್ಶಿ ಡಾ.ಮಾದೇಗೌಡ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!