ರೋಗಿ ಕರೆದೊಯ್ಯುವ ಆಂಬ್ಯುಲೆನ್ಸ್ ಗೇ ಬೇಕಿದೆ ಚಿಕಿತ್ಸೆ ನಂಜನಗೂಡು : ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲೆಂದೇ ಸರ್ಕಾರ 108 ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಿದೆ ಆದರೆ ತಾಲ್ಲೂಕಿನ ಹಿಮ್ಮಾವು ಬಳಿ ಕಳೆದ ನಾಲ್ಕು ದಿನಗಳಿಂದ ರಸ್ತೆ ಮಧ್ಯೆ ನಿಂತಲ್ಲೇ ನಿಂತಿದೆ ಇಲ್ಲೊಂದು ಸರ್ಕಾರಿ 108 ಆಂಬ್ಯುಲೆನ್ಸ್. ಹೌದು, ಈ ಗ್ರಾ ಮದ ಬಳಿ ಕಳೆದ ನಾಲ್ಕು ದಿನಗಳಿಂದ 108 ಅಂಬ್ಯುಲೆನ್ಸ್ ಕೆಟ್ಟು ನಿಂತಿದೆತಾದರೂ ಇಲಾಖೆಯ ಯಾರು ಕೂಡ ಇತ್ತ ಗಮನಹರಿಸಿಲ್ಲ. ಈ ಮಾರ್ಗದಲ್ಲಿ ತೆರಳುವ ಸಾಕಷ್ಟು ಜನರಿಗೆ ಈ ಆಂಬುಲೆನ್ಸ್ ಒಂದು ರೀತಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಹಾಗೇ ಇಷ್ಟು ದಿನಗಳಿಂದ ಇಲ್ಯಾಕೆ ಕೆಟ್ಟುನಿಂತಿದೆ ಎಂಬ ಪ್ರಶ್ನೆಯನ್ನು ಉಂಟು ಮಾಡುತ್ತಿದೆ. ತಕ್ಷಣ ಈ ರಿ 108 ಅಂಬ್ಯುಲೆನ್ಸ್ ಅನ್ನು ಇಲ್ಲಿಂದ ತೆರವುಗೊಳಿಸಿ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. Tags: 108 ಅಂಬ್ಯುಲೆನ್ಸ್.ನಂಜನಗೂಡು
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಮೃತರ ಸಂಖ್ಯೆ 40ಕ್ಕೆ ಏರಿಕೆ August 16, 1:22 AM Byಆಂದೋಲನ ಡೆಸ್ಕ್
ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್ August 15, 3:08 PM Byಆಂದೋಲನ ಡೆಸ್ಕ್