Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಗಜಪಯಣಕ್ಕೆ ಸಿದ್ಧತೆ ; ಬರುವ ಆನೆಗಳು ಯಾವುವು ?

ಮೈಸೂರು : ಈ ಸಾಲಿನ 2022 ರ ದಸರಾ ಮಹೋತ್ಸವದಲ್ಲಿ ಭಾಗವಹಿಸಲು 5 ಶಿಬಿರದಿಂದ ಆನೆಗಳು ಕರೆತರಲಾಗುತ್ತಿದೆ.

ಈ ಬಾರಿ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರು ಹಾಗೂ ವಿವಿಧ ಜಾನಪದ ಕಲಾ ತಂಡಗಳನ್ನು ಬಳಸಿಕೊಂಡು ಆಗಸ್ಟ್ 7ರಂದು ಆರಂಭವಾಗಲಿರುವ ಗಜ ಪಯಣಕ್ಕೆ ಅರಣ್ಯ ಇಲಾಖೆ ಪೂರ್ವ ತಯಾರಿ ಜೋರಾಗಿಯೇ ನಡೆಯುತ್ತಿದೆ. ಪ್ರತಿ ವರ್ಷದಂತೆ ಗಜಪಯಣ ಕಾರ್ಯಕ್ರಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಳ್ಳಿಯ ಮುಖ್ಯ ದ್ವಾರದ ಮುಂಭಾಗ ಆಗಸ್ಟ್ ೭ ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಲಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ಪ್ರಚಾರವಿಲ್ಲದೆ, ಸದ್ದಿಲ್ಲದೆ ಆಗಮಿಸುತ್ತಿದ್ದ ಗಜಪಡೆಗೆ ಈ ಸಲ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಮೖೆಸೂರು ತಾಯಾರಾಗಿದೆ.

ಕೊರೋನ ಸಮಯದಲ್ಲಿ ಗಜ ಪಯಣವನ್ನು ಕೇವಲ ಅಧಿಕಾರಿಗಳೇ ಸೇರಿ ಮಾಡುತ್ತಿದ್ದರು. ಎಲ್ಲಾ ಉಸ್ತುವಾರಿ ಸಚಿವರಿಂದ ಪೂಜೆ ನೆರವೇರಿಸಿ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ, ಈ ಸಾಲಿನಿಂದ ಹೊಸ ರೂಪ ನೀಡಲಾಗುತ್ತಿದೆ. ಸುಮಾರು ೫ ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಸ್ವಾಗತಮಾಡಿ ಬರಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ – ಕಾಲೇಜುಗಳು, ಮಹಿಳಾ ಸಂಘಗಳಿಗೂ ಮಾಹಿತಿ ನೀಡಿ, ಗಜ ಪಯಣ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು ೨೦ ಸ್ಥಳಗಳಲ್ಲಿ ದೊಡ್ಡ -ದೊಡ್ಡ ಫಲಕಗಳನ್ನು ಪ್ರದರ್ಶಿಸಿ, ಆಗಸ್ಟ್ ೦೭ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳ ವಿವರ 

ಮತ್ತಿಗೋಡು ಆನೆ ಶಿಬಿರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ

 

ಅಭಿಮನ್ಯು 57 ವರ್ಷದ ಗಂಡು ಆನೆ
ಅಭಿಮನ್ಯು 57 ವರ್ಷದ ಗಂಡು ಆನೆ

ಬಳ್ಳೆ ಆನೆ ಶಿಬಿರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ

 

ಅರ್ಜುನ 63 ವರ್ಷದ ಗಂಡು ಆನೆ
ಅರ್ಜುನ 63 ವರ್ಷದ ಗಂಡು ಆನೆ

ಮತ್ತಿಗೋಡು ಆನೆ ಶಿಬಿರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ

ಗೋಪಾಲಸ್ವಾಮಿ 39ವರ್ಷದ ಗಂಡು ಆನೆ
ಗೋಪಾಲಸ್ವಾಮಿ 39ವರ್ಷದ ಗಂಡು ಆನೆ

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂದ 

ವಿಕ್ರಮ 59 ವರ್ಷದ ಗಂಡು ಆನೆ
ವಿಕ್ರಮ 59 ವರ್ಷದ ಗಂಡು ಆನೆ

ಮತ್ತಿಗೋಡು ಆನೆ ಶಿಬಿರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ 

ಭೀಮ 22 ವರ್ಷದ ಗಂಡು ಆನೆ 
ಭೀಮ 22 ವರ್ಷದ ಗಂಡು ಆನೆ

ಮತ್ತಿಗೋಡು ಆನೆ ಶಿಬಿರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಿಂದ ಮಹೇಂದ್ರ(  39 ವರ್ಷ),

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂದ  – ಧನಂಜಯ ಆನೆ (44 ವರ್ಷ ಗಂಡು),

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂತ – ಕಾವೇರಿ (45 ವರ್ಷ ಹೆಣ್ಣು)

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂದ – ಗೋಪಿ ( 40 ವರ್ಷ ಗಂಡು )

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂದ-  ಶ್ರೀರಾಮ (41  ವರ್ಷ ಗಂಡು )

ದುಬಾರೆ ಆನೆ ಶಿಬಿರ ಮಡಿಕೇರಿ ವಿಭಾಗದಿಂದ-  ವಿಜಯ ( 63 ವರ್ಷ ಹೆಣ್ಣು)

ರಾಮಪುರ ಆನೆ ಶಿಬಿರ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂತ

ಚೈತ್ರ 49 ವರ್ಷ (ಹೆಣ್ಣು ಆನೆ )

ಲಕ್ಷ್ಮೀ  21 ವರ್ಷ (ಹೆಣ್ಣು ಆನೆ )

ಪಾರ್ಥ ಸಾರಥಿ( 18 ವರ್ಷ ಗಂಡು ಆನೆ) 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ