Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ನೇರ ನಿಷ್ಠೂರವಾದಿ ಶ್ರೀನಿವಾಸ್‌ ಪ್ರಸಾದ್‌ ಅವರ ನಿಧನ ಹಳೇ ಮೈಸೂರು ಭಾಗಕ್ಕೆ ತುಂಬಲಾರದ ನಷ್ಟ: ಪ್ರತಾಪ್‌ ಸಿಂಹ

ಮೈಸೂರು: ನಮ್ಮ ಪಕ್ಷದ ಹಿರಿಯ ನೇತಾರರು, ಚಾಮರಾಜನಗರ ಸಂಸದದರಾದ ಪ್ರಸಾದ್‌ ಅವರು ನಮ್ಮನ್ನು ಅಗಲಿದ್ದಾರೆ, ಅವರಿಗೆ ನನ್ನ ನಮನಗಳು. ಅವರು ನನ್ನನ್ನು ವಯಕ್ತಿಕವಾಗಿ ತಮ್ಮ ಮಕ್ಕಳ ರೀತಿಯಲ್ಲಿ ನೋಡಿಕೊಂಡಿದ್ದಾರೆ ಅದಕ್ಕೆ ನಾನು ಸದಾ ಚಿರಋಣಿಯಾದ್ದೇನೆ ಎಂದು ಸಂಸದ ಪ್ರತಾಪ್‌ ಸಿಂಹ, ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ದಲಿತ ಸಮಾಜಕ್ಕೆ ಧ್ವನಿಯಾಗಿರುವ ಜೊತೆಗೆ ಅನ್ಯ ಸಮುದಾಯದ ತಪ್ಪು ಒಪ್ಪುಗಳನ್ನು ನೇರ-ನಿಷ್ಠುರವಾಗಿ ಮಾತನಾಡಿ ಒಳ್ಳೆಯ ಹೆಸರು ಮಾಡಿಕೊಂಡಿರುವ ಸಜ್ಜನ ರಾಜಕಾರಣಿ ಶ್ರೀನಿವಾಸ್‌ ಪ್ರಸಾದ್‌ ಅವರು ಎಂದು ಗುಣಗಾನ ಮಾಡಿದ್ದಾರೆ.

ಅವರು ಎಲ್ಲೇ ಸಿಕ್ಕರು ಮೊದಲು ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದೆ. ಯಾಕೆಂದರೆ ಅದು ಅವರ ವ್ಯಕ್ತಿತ್ವಕ್ಕೋಸ್ಕರ. ಯಾವುದೋ ಒಂದು ಚಿಂತನೆಯನ್ನು ಇಟ್ಟುಕೊಂಡು ಅದನ್ನೇ ಪ್ರತಿಪಾದಿರುವವರು ಹಲವಾರು ಜನರಿದ್ದಾರೆ. ಆದರೆ ಕೇವಲ ತಪ್ಪು ಮತ್ತು ಸರಿ ಈ ಎರಡೇ ವಿಚಾರಗಳನ್ನಿಟ್ಟುಕೊಂಡು ತಮ್ಮ ನಿಲುವನ್ನು ನಿಷ್ಪಕ್ಷಪಾತವಾಗಿ ತೆಗೆದುಕೊಳ್ಳುತ್ತಿದ್ದ ಹಳೇ ಮೈಸೂರು ಭಾಗದ ಏಕಮಾತ್ರ ಹಿಂದುಳಿದ ನಾಯಕ ಎಂದರೇ ಶ್ರೀನವಾಸ್‌ ಪ್ರಸಾದ್‌ ಅವರು. ಅವರ ಅಗಲಿಕೆಯಿಂದ ದಲಿತರ ದೊಡ್ಡ ದನಿ ಉಡುಗಿಹೋಗಿದೆ. ಎಲ್ಲಾ ಸಮಾಜಗಳನ್ನು ತಪ್ಪು, ಸರಿ ಆಧಾರದ ಮೇಲೆ ಅಳೆದು ತೂಗುತ್ತಿದ್ದ ಒಂದು ನಿಷ್ಪಕ್ಷಪಾತವಾದ ಮನಸ್ಸನ್ನು, ಹೃದಯ ವೈಶಾಲ್ಯತೆಯಿದ್ದ ಪ್ರಮುಖ ವ್ಯಕ್ತಿಯನ್ನು ಹಳೇ ಮೈಸೂರು ಭಾಗ ಇಂದು ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸಿದರು.

Tags: