Mysore
23
clear sky

Social Media

ಸೋಮವಾರ, 25 ಮೇ 2026
Light
Dark

ಸಾಲಬಾಧೆ ತಾಳಲಾರದೇ ಅನ್ನದಾತ ಆತ್ಮಹತ್ಯೆ

farmer commits suicide

ಮೈಸೂರು: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ.

ಸಾಲಿಗ್ರಾಮ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ರೈತ ಗೋವಿಂದೇಗೌಡ ಎಂಬುವವರೇ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ.

ಗೋವಿಂದೇ ಗೌಡ ಅವರು, ವಿವಿಧ ಬ್ಯಾಂಕುಗಳಲ್ಲಿ ಹಾಗೂ ಕೈ ಸಾಲ ಸೇರಿ ಒಟ್ಟು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬೆಳೆನಷ್ಟ ಹಾಗೂ ಸಾಲಬಾಧೆಯಿಂದ ಮನನೊಂದು ಗೋವಿಂದೇಗೌಡ ಅವರು ಜಮೀನಿನಲ್ಲಿ ವಿಷದ ಕಾಳಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!