ಮೈಸೂರು : ಬೇಸಿಗೆಯ ಬಿರು ಬಿಸಿಲಿನಿಂದ ಒಣಗಿದ್ದ ಕಾಡು ಇದೀಗ ಮಳೆ ಬಿದ್ದ ಹಿನ್ನೆಲೆಯಲ್ಲಿ ಮತ್ತೆ ಹಸಿರಾಗುತ್ತಿವೆ ಕಾಡು ಮತ್ತೆ ಹಸಿರಿನಿಂದ ಕಂಗೊಳಿಸುತ್ತಿದ್ದಂತೆಯೇ ವನ್ಯ ಜೀವಿಗಳು ಸ್ವಚ್ಚಂದವಾಗಿ ಓಡಾಡಿಕೊಂಡಿವೆ.
ಅಂತೆಯೇ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ದಮ್ಮನ ಕಟ್ಟೆ ಸಫಾರಿ ಕೇಂದ್ರದಲ್ಲಿ ತಾಯಿ ಹುಲಿಯೊಂದಿಗೆ ಎರಡು ಮರಿ ಹುಲಿಗಳು ಕಾಣಿಸಿಕೊಂಡಿದ್ದು,ಸಫಾರಿಗೆ ಹೋಗಿದ್ದ ಪ್ರವಾಸಿಗರ ಖುಷಿಯನ್ನು ಇಮ್ಮಡಿಗೊಳಿಸಿವೆ.
ಇನ್ನು ತಾಯಿ ಹುಲಿಯೊಟ್ಟಿಗೆ ಮರಿಗಳು ಆಟವಾಡುತ್ತಾ ಓಡಾಡುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಮೊನ್ನೆಯಷ್ಟೇ ಕಾಕನಕೊಟೆಯಲ್ಲಿ ಪ್ರವಾಸಿಗರ ಕಣ್ಣಿಗೆ ಕರಿ ಚಿರತೆ ಕಾಣಿಸಿಕೊಂಡಿತ್ತು ಇದೀಗ ಬೆಳ್ಳಂಬೆಳಗ್ಗೆಯೇ ಹುಲಿ ತನ್ನ ಮರಿಗಳೊಟ್ಟಿಗೆ ದರ್ಶನ ಕೊಟ್ಟಿದ್ದು ಸಫಾರಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ.