Mysore
26
broken clouds
Light
Dark

ನಾಯಕತ್ವ ಬೆಳೆಸಿಕೊಳ್ಳಲು ಎನ್‌ ಎಸ್‌ ಎಸ್‌  ಅವಶ್ಯಕತೆ ಇದೆ : ಶಾಸಕ ಮಂಜುನಾಥ್‌

ಹುಣಸೂರು : ಎನ್.ಎಸ್.ಎಸ್ ಶಿಬಿರಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಾಯವಾಗಲಿದ್ದು, ಇದರ ಮೂಲಕ ವಿದ್ಯಾರ್ಥಿಗಳು ಮೊದಲು ಜಾಗೃತರಾಗಿ ನಂತರ ಮತ್ತೊಬ್ಬರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಕರೆ ನೀಡಿದರು.

ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಗಾವಡಗೆರೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎಂಟನೇ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಂತರ ಭಾಗದಲ್ಲಿ ಇನ್ನೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಕೊರತೆ ಇದ್ದು, ಅದನ್ನು ವಿದ್ಯಾರ್ಥಿಗಳು ಅವರಿಗೆ ಮುಟ್ಟಿಸುವ ಅನಿವಾರ್ಯ ಇದೆ ಎಂದು ತಿಳಿಸಿದ ಅವರು ಶಿಬಿರದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸಮವಸ್ತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಮೂಕನಹಳ್ಳಿ ಗ್ರಾಮ ಪಂಚಾಯಿತಿಅಧ್ಯಕ್ಷೆ ನಾಗಮ್ಮ, ಶಿಬಿರದ ಕಾರ್ಯಕ್ರಮ ಅಧಿಕಾರಿ ಮರಿಸ್ವಾಮಿ, ಸಹಸಂಯೋಜಕರಾದ ಮಂಜು, ಮಹಿಳಾ ಸಹಸಂಯೋಜಕರಾದ ವಿದ್ಯಾಶ್ರೀ, ಗಾವಡಗೆರೆ ಕಾಲೇಜಿನ ಪ್ರಾಂಶುಪಾಲರಾದ ಜನಾರ್ಧನ್, ಪಂಚಾಯಿತಿ ಸದಸ್ಯರುಗಳಾದ ರಾಮೇಗೌಡ, ನೀಲಮ್ಮ, ಮಹದೇವ, ಜಯಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವಪ್ರಸಾದ್, ಸದಸ್ಯರಾದ ಗಣಪತಿ ಇಂದೋಲ್ಕರ್, ಮಹೇಶ್, ಶ್ರೀನಿವಾಸ್, ಕುಮಾರ್, ಚಂದ್ರೇಗೌಡ, ಪ್ರಕಾಶ್, ಪಿಡಿಒ ಶ್ರೀನಿವಾಸ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜು ಹಾಗೂ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಶಿಬಿರದ ವಿದ್ಯಾರ್ಥಿಗಳು ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ