Mysore
20
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡಲು ತೊಡಕುಗಳಿವೆ : ಎಚ್.ಎಂ.ರೇವಣ್ಣ

H.M. Revanna

ಮೈಸೂರು: ಕೆಲವು ಕಾರಣಗಳಿಂದ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣವನ್ನು ಕೊಡಲು ತೊಡಕುಗಳಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರದಲ್ಲಿ ೧.೨೦ ಲಕ್ಷ ಜನರಿಗೆ ಹಣ ಹೋಗಿರಲಿಲ್ಲ. ಒಂದು ಬಾರಿ ಜಿಎಸ್‌ಟಿ ಹಾಗೂ ತೆರಿಗೆ ಪಾವತಿ ಮಾಡಿದವರಿಗೂ ನಿಂತಿತ್ತು. ಅದರಲ್ಲಿ ಈಗ ೫೯ ಸಾವಿರ ಜನರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಉಳಿದ ಫಲಾನುಭವಿಗಳ ಸಮಸ್ಯೆ ಪರಿಹರಿಸಲಾಗುವುದು ಎಂದರು.

ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಹಣ ನಿಲ್ಲಿಸಿಲ್ಲ. ಪ್ರತಿ ತಿಂಗಳು ಹಣ ಕೊಡಲು ಕೆಲವು ತೊಡಕಗಳು ಇವೆ. ಹೀಗಾಗಿ, ಕೊಡಲು ಆಗುತ್ತಿಲ್ಲ. ಗೃಹಲಕ್ಷ್ಮೀಯಡಿ ಹಣ ಕೊಟ್ಟಿದ್ದೇವೆ. ಈಗಲೂ ಕೊಡುತ್ತೇವೆ,ಮುಂದೆಯೂ ಕೊಡುತ್ತೇವೆ ಎಂದು ನುಡಿದರು.

Tags:
error: Content is protected !!