Mysore
20
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ರತ್ನಪುರಿ | ನಾಳೆಯಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಜಾತ್ರೆ

ಹುಣಸೂರು : ರಾಜ್ಯದಲ್ಲೇ ಜಾನುವಾರುಗಳ ಪ್ರಮುಖ ಜಾತ್ರೆಯಲ್ಲೊಂದಾದ ಹುಣಸೂರು ತಾಲೂಕಿನ ರತ್ನಪುರಿ(ದರ್ಗ)ಯಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆ ಮೆರೆವ ಶ್ರೀ ಅಂಜನೇಯ ಸ್ವಾಮಿಯ ಮಹಾಭಿಷೇಕ, ಪಲ್ಲಕಿ ಉತ್ಸವ ಹಾಗೂ ಮುಸ್ಲಿಮರ ಜಮಾಲ್ ಬೀ ಬೀ ಮಾ ಸಾಹೇಬರವರ ಗಂಧೊತ್ಸವದ ಉರುಸ್ ಫೆ.6ರಿಂದ 9ರವರೆಗೆ ವಿಜೃಂಭಿಸಲಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಯಲ್ಲಿ ಮಾಹಿತಿ ನೀಡಿದ ಜಾತ್ರಾ ಮಹೋತ್ಸವ ಸಮಿಯ ಅಧ್ಯಕ್ಷ ಪ್ರಭು ಹಾಗೂ ವಕ್ ಬೋರ್ಡ್ ಸಲಹಾ ಸಮಿತಿ ಸದಸ್ಯರಾದ ಅಜ್ಗರ್ ಪಾಷಾ, ಗ್ರಾಮದಲ್ಲಿ ಇಡೀ ರಾಜ್ಯವೇ ಇತ್ತ ನೋಡುವಂತೆ ಹಿಂದೂ-ಮುಸ್ಲಿಂ ಸಮುದಾಯಗಳು ಸೇರಿ ಸಾಮರಸ್ಯ, ಸೌಹಾರ್ದತೆಯಿಂದ ಭಾವೈಕ್ಯತೆ ಸಾರುವಂತೆ ದರ್ಗಾ ಜಾತ್ರೆ ಮತ್ತು ಉರುಸ್ ಅನ್ನು ಅಚರಿಸುತ್ತೇವೆ ಎಂದರು.

ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ನಾಡ ಕ್ರೀಡೆಗಳನ್ನು ಅಚರಿಸಿಕೊಂಡು ಬಂದಿದ್ದೇವೆ, ಅದರಂತೆ ಈ ಬಾರಿಯೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಮತ್ತು ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಪುರುಷರಿಗೆ ಹಮ್ಮಿಕೊಂಡಿದ್ದೇವೆ ಎಂದರು.

ಶ್ರೀ ಅಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಜನಾಭ್ ಜಮಾಲ್ ಬೀಬೀ ಮಾಸಾಹೇಬ ಉರೂಸ್ ಅಂಗವಾಗಿ ಫೆ.6 ಮತ್ತು ಫೆ.7ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಅಯೋಜಿಸಲಾಗಿದೆ ಎಂದರು.

ಮೈಸೂರು -ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕರಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಹಿಸುವರು. ಶಾಸಕರಾದ ಜಿ.ಟಿ.ದೇವೆಗೌಡ, ಮಾಜಿ ಶಾಸಕರಾದ ಹೆಚ್.ಪಿ.ಮಂಜುನಾಥ್ ಅಗಮಿಸುವರು ಎಂದರು.

ಫೆ.7ರ ಶನಿವಾರ ಬೆಳಿಗ್ಗೆ 7 ಗಂಟೆಗೆ ಧರ್ಮಾಪುರ ಗ್ರಾಮಸ್ಥರಿಂದ ಕೊಂಡೊತ್ಸವ ಹಾಗೂ ಆಂಜನೇಯ ಸ್ವಾಮಿಗೆ ಮಹಾ ಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಅನ್ನಸಂತರ್ಪಣೆ, ನಂತರ ಪುರುಷರ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಫೆ.8ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪುರುಷರ ಹಗ್ಗ-ಜಗ್ಗಾಟ ಪಂದ್ಯಾವಳಿ, ರಾತ್ರಿ 7 ಗಂಟೆಗೆ ಉರುಸ್ ಮತ್ತು ಗಂಧ ಮಹೋತ್ಸವ ನಡೆಯಲಿದೆ. 8 ಗಂಟೆಗೆ ಹಗ್ಗ ಜಗ್ಗಾಟದ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಾವಳಿ ನಡೆಯಲಿದೆ. ಫೆ.9ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ದನಗಳ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಎಪಿಎಂಸಿ ವತಿಯಿಂದ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

Tags:
error: Content is protected !!