Mysore
21
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಸಂಜೆ ಮಳೆಗೆ ಬೆಚ್ಚಿದ ಮೈಸೂರು

ಮೈಸೂರು:  ನಗರದೆಲ್ಲೆಡೆ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ದಿಢೀರ್‌ ಶುರುವಾದ ಮಳೆಯು ತಡರಾತ್ರಿವರೆಗೆ ಸುರಿಯಿತು.

ಪ್ರತಿದಿನ ಸಂಜೆ ಬರುವ ಮಳೆಯಿಂದ ಬೀದಿಬದಿ ವ್ಯಾಪಾರಿಗಳು, ವ್ಯಾಪಾರವಿಲ್ಲದೇ ಕಂಗಾಲಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದ ಮಾಡಿದ ಕೆಲಸವೆಲ್ಲಾ ಹಾಳಾಗುತ್ತಿದೆ. ಕಾಮಗಾರಿಗೆ ತಂದ ಮರಳು,ನೀರು ಪಾಲಾಗುತ್ತಿದೆ.

ಜೋರು ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣ, ಹಲವು ಪ್ರದೇಶಗಳು ಕತ್ತಲಲ್ಲಿಮುಳುಗಿದವು, ಅಗ್ರಹಾರ,  ಕೆ ಆರ್‌ ಸರ್ಕಲ್‌, ಆರ್‌ ಟಿ ಓ ವೃತ್ತಗ ಹಾಗೂ ಹಲವು ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡಿದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!