Mysore
27
clear sky

Social Media

ಮಂಗಳವಾರ, 21 ಜನವರಿ 2025
Light
Dark

ವಿದ್ಯೆ ಯಾರಪ್ಪನ ಮನೆ ಸ್ವತ್ತಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು : ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ ರೀತಿ ಸರ್ಕಾರ ನಡೆಸಿದರೆ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡಿನಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 133ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಹೇಳಿದ ರೀತಿ ಸರ್ಕಾರ ನಡೆಸಿದರೆ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಸಾಧ್ಯ ಎಂದು ತಿಳಿಸಿದರು.

ಬುದ್ದಿವಂತಿಕೆ ಎಂಬುದು ಯಾರ ಅಪ್ಪನ ಮನೆ ಸ್ವತ್ತಲ್ಲ. ನಮಗೆ ಅವಕಾಶ ಸಿಕ್ಕಿದ್ದರೆ ಮುಂದೆ ಇರುತ್ತಿದ್ದವು, ಅವಕಾಶ ಸಿಕ್ಕಿಲ್ಲ ಹೀಗಾಗಿ ಹಿಂದೆ ಬಿದ್ದಿದ್ದೇವೆ ಎಂದು ಅಭಿಪ್ರಯಾ ವ್ಯಕ್ತಪಡಿಸಿದರು.

ನಾನು ಓದಿ ವಕೀಲನಾಗಿದ್ದಕ್ಕೆ ಇದನ್ನೆಲ್ಲಾ ಸಂವಿಧಾನದ ಓದಿ ನಿಮಗೆ ಹೇಳಲು ಸಾಧ್ಯವಾಗಿದೆ. ಒಂದು ವೇಳೆ ನಾನು ಓದದೇ ಇದ್ದಿದ್ದರೇ ಇದನ್ನೆಲ್ಲ ನಿಮಗೆ ಹೇಳಲಾಗುತ್ತಿತ್ತೇ. ಅವಕಾಶ ಸಿಕ್ಕ ಕಾರಣ ವಕೀಲನಾದೆ, ರಾಜಕಾರಣಿಯಾದೆ ರಾಜ್ಯದ ಮುಖ್ಯಮಂತ್ರಿಯೂ ಆದೆ. ಒಂದು ವೇಳೆ ಅವಕಾಶ ಸಿಕ್ಕಿಲ್ಲದಿದ್ದರೇ ಇದೆಲ್ಲಾ ಆಗಲು ಸಾಧ್ಯವಾಗುತ್ತಿತ್ತ ಎಂದರು.

ಪ್ರತಿಯೊಬ್ಬರು ವಿದ್ಯಾವಂತರಾಗಾಬೇಕು, ಸ್ವಾಭಿಮಾನಿಗಳಾಗಬೇಕು ಹಾಗೂ ಮನುಷ್ಯರಾಗಿ ಎಲ್ಲರನ್ನೂ ಪ್ರೀತಿಸಬೇಕು. ಆಗ ಮಾತ್ರ ಸಮಾನತೆ ಬರಲು ಸಾಧ್ಯ ಎಂದು ಹೇಳಿದರು. ಅಂಬೇಡ್ಕರ್‌ ಹೇಗೆ ಹೇಳಿದ್ದಾರೆ ಹಾಗೆ ನಡೆದುಕೊಳ್ಳೋಣ ಎಂದು ಹೇಳಿದರು.

Tags: