Mysore
22
scattered clouds

Social Media

ಸೋಮವಾರ, 29 ಜೂನ್ 2026
Light
Dark

ನಿಮ್ಮೊಳಗಿನ ಶಕ್ತಿ ಅರಿತು ಬೆಳೆಯಿರಿ: ಡಾ. ವಸಂತ ಕುಮಾರ್

ಮೈಸೂರು: ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಅಭಿವಿನ್ಯಾಸ ಕಾರ್ಯಕ್ರಮವನ್ನು ಡಾ.ವಸಂತ್‌ ಕುಮಾರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿ, “ಪ್ರತಿ ವಿದ್ಯಾರ್ಥಿಯ ಒಳಗೆ ಒಂದು ಶಕ್ತಿ ಇರುತ್ತದೆ. ಆ ಶಕ್ತಿ ಬೆಳಕಾಗಬೇಕು, ಬೆಂಕಿ ಆಗಬಾರದು” ಎಂದರು. ಓದಿನ ಬಗ್ಗೆ ಆತಂಕ ಬಿಟ್ಟು, ಇಷ್ಟಪಟ್ಟು ಓದಿದರೆ ಉತ್ತಮ ಅಂಕಗಳು ಗಳಿಸಲು ಸಾಧ್ಯ ಮತ್ತು ನಿಮ್ಮ ಮೇಲೆ ನಿಮಗೆ ಭರವಸೆ ಹೆಚ್ಚಾಗುತ್ತದೆ ಎಂದರು ಕುವೆಂಪುರವರನ್ನು ಸ್ಮರಿಸುತ್ತಾ ಅವರ ‘ಓ ನನ್ನ ಚೇತನ’ ಗೀತೆಯನ್ನು ವಿದ್ಯಾರ್ಥಿನಿಯರ ಜೊತೆಗೆ ಹಾಡಿದರು.

ಕನ್ನಡ, ಆಂಗ್ಲ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮನ:ಶಾಸ್ತ್ರ, ಮತ್ತು ಭೂಗೋಳಶಾಸ್ತ್ರ ವಿಭಾಗಗಳ ಸಂಯೋಜಕರು ಅವರವರ ವಿಭಾಗ ಮತ್ತು ಪಠ್ಯದ ಪರಿಚಯವನ್ನು ಮಾಡಿಕೊಟ್ಟರು. ವಿಷಯಗಳ ಮಹತ್ವ ಮತ್ತು ಪ್ರಸ್ತುತತೆ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಆಡಳಿತ ಮತ್ತು ಕಛೇರಿ ವ್ಯವಸ್ಥೆ ಕುರಿತು ಕಛೇರಿ ವ್ಯವಸ್ಥಾಪಕರು ಮಾಹಿತಿ ನೀಡಿದರು. ವಿವಿಧ ಸಮಿತಿಗಳಾದ ಕ್ರೀಡೆ, ಸಾಂಸ್ಕೃತಿಕ ಸಮಿತಿ, ವಾರ್ಷಿಕ ಸಂಚಿಕೆ, ಗ್ರಂಥಾಲಯ, ಎನ್ಎಸ್ಎಸ್, ದೈಹಿಕ ಶಿಕ್ಷಣ, ಮಹಿಳಾ ದೌರ್ಜನ್ಯ ನಿವಾರಣಾ ಸಮಿತಿ, ಉದ್ಯೋಗ ಮಾಹಿತಿ ಸಮಿತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಹಾಗೂ ವಿದ್ಯಾರ್ಥಿ ನಿಲಯದ ಸೌಲಭ್ಯಗಳ ಬಗ್ಗೆ ವಿವರಗಳನ್ನು ಒದಗಿಸಲಾಯಿತು. ಸಮಿತಿಗಳ ಚಟುವಟಿಕೆ ಹಾಗೂ ಮಹತ್ವದ ಕುರಿತು ತಿಳಿಸಲಾಯಿತು.

ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಅಶ್ವಿನಿ, ಅಭಿವಿನ್ಯಾಸ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು.

ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವ್ಯ, ಇತಿಹಾಸ ವಿಭಾಗದ ನಾಗಮಣಿ, ಕನ್ನಡ ಪ್ರಾಧ್ಯಾಪಕರಾದ ಡಾ. ನಂಜುಂಡಯ್ಯ ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!