Mysore
27
haze

Social Media

ಮಂಗಳವಾರ, 17 ನವೆಂಬರ್ 2026
Light
Dark

ಓದುಗರ ಪತ್ರ: ಬಸ್ ಸೌಲಭ್ಯ ಕಲ್ಪಿಸಿ

dgp murder case

ಹೆಚ್. ಡಿ. ಕೋಟೆ ತಾಲ್ಲೂಕಿನ ಎಂ. ಎಂ. ಮುಖ್ಯ ರಸ್ತೆಯಲ್ಲಿರುವ ಹಂಪಾಪುರ ಗ್ರಾಮಕ್ಕೆ ಕೆಲಸ ಕಾರ್ಯಗಳಿಗಾಗಿ ದಿನನಿತ್ಯ ಸಾಕಷ್ಟು ಜನ ಬಂದು ಹೋಗುತ್ತಾರೆ.

ಹಂಪಾಪುರ ಮಾರ್ಗದಲ್ಲಿ ಬರುವ ಗ್ರಾಮಗಳಾದ ಮದ್ದೂರ ಹುಂಡಿ, ಮದ್ದೂರು, ಚುಂಚುರಾಯನ ಹುಂಡಿ, ಕಲ್ಲಹಳ್ಳಿ, ಚಾಮಲಾಪುರ, ಕ್ಯಾತನಹಳ್ಳಿಗೆ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಈ ಗ್ರಾಮಗಳಿಂದ ಹಂಪಾಪುರಕ್ಕೆ ೨೦ರಿಂದ ೨೫ ಕಿ.ಮೀ ಆಗುತ್ತದೆ. ಈ ಮಾರ್ಗವಾಗಿ ಹೆಚ್.ಡಿ. ಕೋಟೆ ಹಾಗೂ ಮೈಸೂರು ಕಡೆಗೂ ಹೋಗಬಹುದು. ಆದ್ದರಿಂದ ಈ ಗ್ರಾಮಗಳಿಗೆ ರಾಜ್ಯ ಸಾರಿಗೆ ನಿಗಮದ ಬಸ್ಸುಗಳ ಓಡಾಟ ಆರಂಭಿಸಿದರೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.ಹಾಗೆಯೇ ಜನಪ್ರತಿನಿಧಿಗಳೂ ಮನಸ್ಸು ಮಾಡಿದರೆ ಕೆಲಸ ಬೇಗ ಆಗುತ್ತದೆ.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

Tags:
error: Content is protected !!