Mysore
28
broken clouds

Social Media

ಮಂಗಳವಾರ, 17 ನವೆಂಬರ್ 2026
Light
Dark

ಬೋನಿನ ಗೇಟ್ ತೆರೆಯುತ್ತಿದ್ದಂತೆ ಸಿಬ್ಬಂದಿ ಮೇಲೆ ದಾಳಿ ನಡೆಸಿ ಚಿರತೆ ಪರಾರಿ!

ಮೈಸೂರು: ತಾಲೂಕಿನ ಮರಸೆ ಗ್ರಾಮದಲ್ಲಿ ಸೆರೆಹಿಡಿದಿದ್ದ ಚಿರತೆಯೊಂದು ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಬೋನಿನೊಳಗೆ ಆಕ್ರೋಶದಿಂದ ವರ್ತಿಸುತ್ತಿದ್ದ ಚಿರತೆಗೆ ಅರವಳಿಕೆ ನೀಡುವ ಬದಲು ಸಿಬ್ಬಂದಿ ಗೇಟ್ ತೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಚಿರತೆ ಸಿಬ್ಬಂದಿಯೊಬ್ಬರ ಮುಖಕ್ಕೆ ಪಂಜದಿಂದ ಹೊಡೆದು ಓಡಿಹೋಗಿದೆ.

ದಾಳಿಯಲ್ಲಿ ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಚಿರತೆ ತಪ್ಪಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

Tags:
error: Content is protected !!