ಎಚ್.ಡಿ.ಕೋಟೆ : ಹುಲಿ ದಾಳಿಯಿಂದ ತತ್ತರಿಸಿರುವ ತಾಲ್ಲೂಕಿನ ಜನತೆಗೆ ಇದೀಗ ಚಿರತೆ ದಾಳಿಯು ನಿದ್ದೆಗೆಡಿಸಿದೆ. ಪಟ್ಟಣದ ವಾರ್ಡ್ ನಂಬರ್ 21ರ ವಡ್ಡರಗುಡಿಯಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಗ್ರಾಮದ ಬೀರೇಗೌಡರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸುಮಾರು ಮೂವತ್ತು ಕೆಜಿ ಇರುವಂತ ಮೇಕೆ ಚಿರತೆ ದಾಳಿಗೆ ಬಲಿಯಾಗಿದೆ.
ವಿಷಯ ತಿಳಿಸಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಬೋನ್ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿರುತ್ತಾರೆ. ಅಕ್ಕ ಪಕ್ಕದ ಮನೆಯವರು ಹಾಗೂ ವಾರ್ಡಿನ ಜನಸಾಮಾನ್ಯರು ಜಾಗರೂಕತೆಯಿಂದ ಇರಬೇಕು ಹಾಗೂ ಹಸು ಕುರಿ ಮೇಕೆ ಗಳನ್ನು ಸ್ವಲ್ಪ ಜವಾಬ್ದಾರಿಯಾಗಿ ಕಟ್ಟಿಕೊಳ್ಳಬೇಕು ಎಂದು ಮಾಜಿ ಪುರಸಭಾ ಸದಸ್ಯರು ಸೋಮಶೇಖರ್ ಮನವಿ ಮಾಡಿದ್ದಾರೆ.





