ಮೈಸೂರು: ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲ್ಲೂಕು ವ್ಯಾಪ್ತಿಯ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತೀಕರಿಸುವ ಅಭಿಯಾನದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ವಿದ್ಯಾರ್ಥಿಗಳ ನಿವಾಸಕ್ಕೆ ಭೇಟಿಯಾಗಿ ಸಲಹೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅವರು ಇಂದು(ಫೆಬ್ರವರಿ.5) ಮೈಸೂರು ತಾಲ್ಲೂಕಿನ ಹಿನಕಲ್ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸೆಲ್‌ಸಿ ವಿದ್ಯಾರ್ಥಿಗಳ ನಿವಾಸಗಳಿಗೆ ಭೇಟಿ ನೀಡಿ ಅವರ ಕಲಿಯುವಿಕೆಯ ಕುರಿತು ಪರಿಶೀಲಿಸಿದ್ದಾರೆ. ಅಲ್ಲದೇ ತಮ್ಮ ಕಲಿಕೆಯಲ್ಲಿ ತೊಡಕುಗಳಿದ್ದಲ್ಲಿ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಹಾಗೂ ಸಹ ಶಿಕ್ಷಕರೊಂದಿಗೆ ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಇನ್ನೂ ಪರೀಕ್ಷಾ ಸಮಯದಲ್ಲಿ ಅಧ್ಯಯನ, ಆರೋಗ್ಯ ಹಾಗೂ ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಿ ನಡೆಸುವಂತೆ ಕಿವಿಮಾತು ಹೇಳಿದರು.