Mysore
19
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಸಫಾರಿ ವಾಹನದ ಮೇಲೆ ಆನೆ ದಾಳಿ

ಮೈಸೂರು : ಸಫಾರಿ ವಾಹನಗಳ‌ ಮೇಲೆ ಆನೆ ದಾಳಿ ನಡೆಸಲು ಮುಂದಾದ ಘಟನೆ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ‌ ನಾಗರಹೊಳೆ ಅರಣ್ಯ ಪ್ರದೇಶದ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮೊದಲಿಗೆ ಖಾಸಗಿ ವಾಹನ ನೋಡಿ‌ ಓಡಿ ಬಂದ ಆನೆ ನಂತರ ಸಫಾರಿ ವಾಹನದ ಮೇಲೆ ದಾಳಿಗೆ ಮುಂದಾಗಿದೆ. ಬಳಿಕ ಎದುರಿನಲ್ಲಿ ಮತ್ತೊಂದು ಸಫಾರಿ ವಾಹನದ ಬಳಿಗೂ ಓಡಿ ಬಂದಿದೆ. ವಾಹನವನ್ನು ಹಿಮ್ಮುಖವಾಗಿ ಚಲಿಸಿದ ಬಳಿಕ ಆನೆ ವಾಪಸ್‌ ಹೋಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!