Mysore
21
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಮಗಳ ಹುಟ್ಟುಹಬ್ಬಕ್ಕೆಂದು ಊರಿಗೆ ಬಂದಿದ್ದ ಯೋಧ ಸಾವು

ಮೈಸೂರು : ಮಗಳ ಹುಟ್ಟುಹಬ್ಬಕ್ಕೆಂದು ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಸುರೇಶ್ (42) ನಿಧನ ಹೊಂದಿದ ಯೋಧ. ಜಮ್ಮು-ಕಾಶ್ಮೀರದ ವಾಡಿ ಸೆಕ್ಟರ್‌ನಲ್ಲಿ ನಾಯಕ್ ಸುಬೇದಾರ್ ಆಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದರು.

ಪುತ್ರಿ ಪ್ರಕೃತಿಯ 5 ನೇ ವರ್ಷದ ಹುಟ್ಟುಹಬ್ಬ ಆಚರಿಸಲು ಯೋಧ ಸುರೇಶ್ ಹೊಸ ಅಗ್ರಹಾರ ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲದೆ, ಜನ್ಮದಿನಾಚರಣೆ ಅಂಗವಾಗಿ ಡೋರ್ನಹಳ್ಳಿಯ ಅನಾಥಾಶ್ರಮಕ್ಕೆ ಊಟ ನೀಡಲೆಂದು ಸಿದ್ಧರಾಗುತ್ತಿದ್ದಾಗ ಕುಸಿದುಬಿದ್ದಿದ್ದಾರೆ.

ಕೂಡಲೇ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ದಾದರಿ ಮಧ್ಯೆ ಕೊನೆಯುಸಿರೆಳೆದರು. ಗಾಳಿಯಲ್ಲಿ ಗುಂಡು ಹಾರಿಸಿ ಯೋಧರು ಗೌರವ ಸಲ್ಲಿಸಿದರು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!