Mysore
21
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ನಗರದ ರಾಮಾನುಜ ರಸ್ತೆಯಲ್ಲಿರುವ ಮನೆಯ ಹಿಂಭಾಗದ ಕೆರೆಯಲ್ಲಿ ಮೊಸಳೆ ಪತ್ತೆ.

ಮೈಸೂರು ; ನಗರದ ರಾಮನುಜ ರಸ್ತೆಯ 9ನೇ ಕ್ರಾಸ್‌ ಬಳಿ ಇರುವ ಕೆರೆಯ ದಡದಲ್ಲಿ ಮೊಸಳೆ ಬಾಯಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

ನೀರನ್ನು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ  ಎನ್ನಲಾಗಿದೆ. ಸ್ಥಳೀಯರಿಗೆ ಸೇರಿದ ಹಸು ಮೊಸಳೆ ಬಾಯಿಗೆ ತುತ್ತಾಗಿದೆ.  ಮನೆಯ ಹಿಂಭಾಗದ ಜಾಗದಲ್ಲಿ  ಹಸುವನ್ನು ಮೇಯಲು ಬಿಟ್ಟಿದ್ದು ಇಂದು ಬೆಳಿಗ್ಗೆ ಮೊಸಳೆ ಹಸುವನ್ನು ಕೆರೆಯ ಒಳಗೆ ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಹಸು ಕೆರೆಯಲ್ಲಿ ಬಿದ್ದಿರುವುದನ್ನು ಗಮನಿಸಿ ಸ್ಥಳೀಯ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಇಲಾಖೆ ಸಿಬ್ಬಂದಿ  ಭೇಟಿ ನೀಡಿ ಮುಂದಿನ ಕಾರ್ಯಚರಣೆ ಕೈಗೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!