Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ಮೈಸೂರು/ಮದ್ರಾಸ್ ರೆಜಿಮೆಂಟ್​ಗೆ ರಾಜವಂಶಸ್ಥರ ಭೇಟಿ

ಮೈಸೂರು: ದೆಹಲಿಯ ಭಾರತೀಯ ಸೇನಾ ಪಡೆಯ 18ನೇ ಮೈಸೂರು/ಮದ್ರಾಸ್ ರೆಜಿಮೆಂಟ್​ಗೆ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪತ್ನಿ ಸಮೇತರಾಗಿ ಭೇಟಿ ನೀಡಿ ಈ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ‌ ಪೋಟೋ ಹಂಚಿಕೊಂಡಿದ್ದಾರೆ.

18 ಮದ್ರಾಸ್ (ಮೈಸೂರು) ಹಿಂದಿನ ಮೈಸೂರು ಸಾಮ್ರಾಜ್ಯದ 1 ನೇ ಕಾಲಾಳುಪಡೆ ಬೆಟಾಲಿಯನ್ ಆಗಿತ್ತು. ರಾಜಪ್ರಭುತ್ವದ ರಾಜ್ಯಗಳ ವಿಲೀನದ ನಂತರ ಬೆಟಾಲಿಯನ್ ಅನ್ನು 18 ನೇ ಮದ್ರಾಸ್ ಬೆಟಾಲಿಯನ್ ಆಗಿ ಭಾರತೀಯ ಸೇನೆಗೆ ಸೇರಿಸಲಾಯಿತು ಎಂದು ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನನ್ನ ಶ್ರೀಮತಿ ತ್ರಿಶಿಖಾ ಕುಮಾರಿ ಒಡೆಯರ್ ಜೊತೆಗೆ ದೆಹಲಿಯ 18 ಮದ್ರಾಸ್ (ಮೈಸೂರು) ಬೆಟಾಲಿಯನ್‌ಗೆ ಭೇಟಿ ನೀಡಿದ್ದು ಒಂದು ಗೌರವ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ