ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಮೊಬೈಲ್ ಉಪಯೋಗಿಸಬಾರದೆಂದು ನಿಯಮವನ್ನು ಜಾರಿಗೆ ತಂದು ಎರಡು ವರ್ಷಗಳೇ ಕಳೆದರೂ ಮೊಬೈಲ್‌ಗಳ ಸದ್ದು ಪ್ರಯಾಣಿಕರಿಗೆ ಕಿರಿಕಿರಿ ಮಾಡುವ ಪ್ರಕರಣಗಳು ನಿತ್ಯವೂ ನಡೆಯುತ್ತಲೇ ಇವೆ.
ನಿಯಮ ಉಲ್ಲಂಸುವವರನ್ನು ಪ್ರಯಾಣಿಕರು ಅಥವಾ ನಿರ್ವಾಹಕರು ಪ್ರಶ್ನಿಸಿದರೆ ನಮ್ಮ ಮೊಬೈಲ್, ನಮ್ಮ ಇಷ್ಟ ಎಂಬ ಉಡಾ-ಯ ಉತ್ತರವೂ ಬರುತ್ತದೆ. ಸಾರಿಗೆ ನಿಗಮದ ಅಧಿಕಾರಿಗಳು ನಿಯಮ ಉಲ್ಲಂಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
-ರಾಜಶೇಖರ ಮೂರ್ತಿ, ಬೆಳಗನಹಳ್ಳಿ, ಹೆಚ್.ಡಿ.ಕೋಟೆ ತಾ.




