Mysore
23
scattered clouds

Social Media

ಶುಕ್ರವಾರ, 02 ಅಕ್ಟೋಬರ್ 2026
Light
Dark

ನಾಳೆ ರಾಜ್ಯಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌

ಬೆಂಗಳೂರು: ಆನ್‌ಲೈನ್‌ ಮೂಲಕ ಔಷಧಿಗಳ ಖರೀದಿ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ನಾಳೆ ರಾಜ್ಯದಾದ್ಯಂತ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಲಿವೆ.

ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದಿಂದ ದೇಶದಾದ್ಯಂತ ಮೆಡಿಕಲ್‌ ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬಂದ್‌ಗೆ ಬೆಂಬಲಿಸಿ ಮೆಡಿಕಲ್‌ಗಳನ್ನು ಕ್ಲೋಸ್‌ ಮಾಡಲಿದ್ದಾರೆ.

ರಾಜ್ಯದಲ್ಲಿ 26,000ಕ್ಕೂ ಹೆಚ್ಚು ಮೆಡಿಕಲ್‌ಗಳಿದ್ದು, ನಾಳೆ ಇಡೀ ದಿನ ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಲಿವೆ.

ವಿವಿಧ ಆಪ್‌ಗಳಿಂದ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದು ನೋಂದಣಿ ಪಡೆದ ಮೆಡಿಕಲ್‌ ಮಾಲೀಕರಿಗೆ ಹೊಡೆತ ಬೀಳುತ್ತಿದೆ ಎಂದು ಮೆಡಿಕಲ್‌ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

Tags:
error: Content is protected !!