Light
Dark

ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ : ಸಂದೇಶ್ ಸ್ವಾಮಿ

ಮೈಸೂರು : “ಒಬ್ಬ ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಅವರು ಮಾತನಾಡಿದರು.

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ 40 ವರ್ಷಗಳಿಂದ ಮನೆ ಮನೆಗೆ ತೆರಳಿ ಪತ್ರಿಕಾ ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕ ಸೇನಾನಿಗಳಿಗೆ ಇಂದು ನಗರದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಗ್ರಹಾರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಬಳಿಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪತ್ರಿಕಾ ವಿತರಕರಾದ ಓಂ ದೇವ್, ಹರೀಶ್, ಜವರಪ್ಪ, ಮಂಜುನಾಥ್ , ಚಂದ್ರಶೇಖರ್ ಜೈದೇವ್ , ಪಾರ್ಶ್ವನಾಥ,
ರವರೆಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಅವರು  ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸವ ಕಾರ್ಯ ಮಾಡುತ್ತಾರೆ. ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದರು.
ಸಾಮಾನ್ಯವಾಗಿ ಜನರು ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುತ್ತಾರೆ. ಅದು ಬದಲಾವಣೆಯಾಗಬೇಕು. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವ ಇರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು ಎಂದು ತಿಳಿಸಿದರು.
ಸರ್ಕಾರ ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸಿಗುವ ಸೌಲಭ್ಯಗಳನ್ನು ಕೊಡಿಸುವ ಮೂಲಕ ರಕ್ಷಣೆಗೆ ಧಾವಿಸಬೇಕು’ಎಂದು ಒತ್ತಾಯಿಸಿದರು.
ಮುಂದುವರಿದು, ಕೊರೊನಾ ವಾರಿಯರ್ಸ್‌ ರೀತಿ ಕೆಲಸ ಮಾಡಿದರೂ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ಅವರಿಗೆ ವಿಶೇಷ ‌ಭತ್ಯೆ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಆಗ ಮಾತ್ರ ಅವರ ಮಾಡುತ್ತಿರುವ ಕೆಲಸದಲ್ಲಿ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು

ನಂತರ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ ಮಾಜಿ ಪ್ರಧಾನಿ ಅಬ್ದುಲ್ ಕಲಾಮ್ ರವರು ಸಹ ಪತ್ರಿಕಾ ವಿತರಕರಾಗಿ ಮೇಲ್ಮಟ್ಟಕ್ಕೆ ಬಂದವ್ರು ,ಪತ್ರಿಕಾ ವಿತರಕರನ್ನು ಕೀಳಾಗಿ ಕಾಣಬಾರದು, ಮಳೆಗಾಲದಲ್ಲಿ ತೊಂದರೆ ವಿತರಕರು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ ವಾಹನಗಳಿಂದ ಪತ್ರಿಕೆಗಳ ಬಂಡಲ್ ಗಳನ್ನು ಇಳಿಸಿಕೊಳ್ಳಲು, ವಿತರಕರಿಗೆ ಹಾಗೂ ಪತ್ರಿಕೆ ಹಾಕುವ ಹುಡುಗರಿಗೆ ಹಂಚಲು ಕಷ್ಟವಾಗುತ್ತದೆ ,ಸ್ವಲ್ಪ ಮಳೆ ಹನಿಗಳು ಬಿದ್ದರೂ ಪತ್ರಿಕೆ ಹಾಳಾಗುತ್ತದೆ ,ಆದ್ದರಿಂದ ಪತ್ರಿಕೆಗಳ ಹಂಚಿಕೆಗೆ ಮೈಸೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜಾಗ ಮೈಸೂರು ನಗರ ಪಾಲಿಕೆ ಶಾಶ್ವತವಾಗಿ ಜಾಗ ಕಲ್ಪಿಸಿ ಕೊಡಬೇಕು ಮೈಸೂರಿನ ವಸ್ತುಪ್ರದರ್ಶನ ಆವರಣ ಅಥವಾ ಟೌನ್ ಹಾಲ್ ಸೇರಿದಂತೆ ಇನ್ನಿತರ ಯಾವುದಾದರೂ ಸ್ಥಳದಲ್ಲಿ ಪತ್ರಿಕಾ ವಿತರಕರಿಗೆ ಶಾಶ್ವತ ಸ್ಥಳಾವಕಾಶ ಮೈಸೂರು ನಗರಪಾಲಿಕೆ ಮಾಡಿಕೊಡಬೇಕು ಹಾಗೂ ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ಹೇಳಿದರು.

ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜರಾಂ ಮಾತನಾಡಿ ಮುಂದಿನ ದಿನಗಳಲ್ಲಿ ಮೈಸೂರು ನಗರದ ಪತ್ರಿಕಾ ವಿತರಕರನ್ನು ಪ್ರತಿಯೊಬ್ಬರಿಗೂ ಗುರುತಿಸುವ ಕೆಲಸ ಆಗಬೇಕು ಸರ್ಕಾರ ಅವರಿಗೊಂದು ಗುರುತಿನ ಚೀಟಿ ನೀಡಬೇಕು ಹಾಗೆಯೇ ನಮ್ಮ ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರಿಗೆ
ಜೀವವಿಮೆ ಹಾಗೂ ಪತ್ರಿಕೆ ಹಾಕುವ ಬ್ಯಾಗ್ ಮತ್ತು ಅವರ ರಕ್ಷಣೆಗೆ ಗುಣಮಟ್ಟದ ಜರ್ಕಿನ್ ನೀಡಲಾಗುವುದು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಇಳೆಯಾಳ್ವಾರ್ ಸ್ವಾಮೀಜಿ ,ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾದ ನಾರಾಯಣ್ ಗೌಡ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ,ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಂ , ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ ಎ, ಮುಡಾ ಸದಸ್ಯರಾದ ನವೀನ್ ಕುಮಾರ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಸುರೇಶ್ ಗೋಲ್ಡ್ , ಚರಣ್ ರಾಜ್ ,ಮಾಧ್ಯಮಗಳಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ವಿನಯ್ ಕಣಗಾಲ್ ,ಸುಚೀಂದ್ರ, ದುರ್ಗಾಪ್ರಸಾದ್  ಹಾಗೂ ಇನ್ನಿತರರು ಹಾಜರಿದ್ದರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ