ಮಂಡ್ಯ: ಅಕ್ಕಪಕ್ಕದವರ ವಿಶ್ವಾಸ, ನಂಬಿಕೆ ಗಳಿಸಿ ಅವರ ಹೆಸರಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದು ಕೋಟಿಗಟ್ಟಲೆ ಹಣದೊಂದಿಗೆ ತಾಯಿ-ಮಗಳು ಪರಾರಿಯಾಗಿರುವ ಘಟನೆ ನಗರದ ಹೊಸಹಳ್ಳಿಯಲ್ಲಿ ನಡೆದಿದೆ.
ಹೊಸಹಳ್ಳಿಯ ೫ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಗಿರಿಜಮ್ಮ ಹಾಗೂ ಪುತ್ರಿ ದಿವ್ಯಾ ಎಂಬವರೇ ಅಕ್ಕಪಕ್ಕದವರನ್ನು ನಂಬಿಸಿ ಕೋಟಿಗಟ್ಟಲೆ ಹಣ ಪಡೆದು ಪರಾರಿಯಾಗಿರುವವರು. ನಗರದ ಹೊಸಹಳ್ಳಿ ಬಡಾವಣೆಯ ೫ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ತಾಯಿ ಗಿರಿಜಮ್ಮ ಹಾಗೂ ಮಗಳು ದಿವ್ಯಾ ಅಕ್ಕಪಕ್ಕದ ಮನೆಯವರ ವಿಶ್ವಾಸ ಗಳಿಸಿ ಅವರ ಹೆಸರಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದು ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಇವರ ಚಾಲಾಕಿತನಕ್ಕೆ ೫೦ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಸದ್ಯ ತಾಯಿ, ಮಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.
ತಾಯಿ-ಮಗಳ ಈ ಕಿಲಾಡಿ ಜೋಡಿ ಸಾಲದ ಮೊತ್ತ ಮರು ಪಾವತಿಸದ ಹಿನ್ನೆಲೆ ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್ಗಳು, ಸಂಘದ ಸಹ ಸದಸ್ಯರು, ಸಾಲಕ್ಕೆ ಮಧ್ಯಸ್ಥಿಕೆ ವಹಿಸಿದ್ದವರ ದುಂಬಾಲು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಹಲವು ಮಹಿಳೆಯರು ಭಯಭೀತರಾಗಿದ್ದಾರೆ.
ಇವರ ನಂಬಿ ಸ್ತ್ರೀಶಕ್ತಿ, ಸ್ವಸಹಾಯ ಸಂಘ ಹಾಗೂ ಮೈಕ್ರೋ ಫೈನಾನ್ಸ್ಗಳಲ್ಲಿ ಜಾಮೀನು ಹಾಕಿರುವ ಬಡಕುಟುಂಬದ ಮಹಿಳೆಯರು, ಕೋಟಿಗಟ್ಟಲೆ ಹಣ ದೋಚಿ ಪರಾರಿಯಾದ ತಾಯಿ-ಮಗಳನ್ನು ಹುಡುಕಲು ಫ್ಲೆಕ್ಸ್ ಚಳವಳಿ ನಡೆಸುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಹಾಕಿ ಆರೋಪಿಗಳ ಪತ್ತೆಗಾಗಿ ಹಾಗೂ ಮಾಹಿತಿಗಾಗಿ ಮನವಿ ಮಾಡಿದ್ದಾರೆ.
ವಂಚಕ ತಾಯಿ, ಮಗಳ ನಡೆಯಿಂದ ೫೦ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಕೂಲಿನಾಲಿ ಮಾಡಿ, ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದ ಕುಟುಂಬಗಳು, ಮಹಿಳೆಯರನ್ನೇ ಈ ಕಿಲಾಡಿ ಜೋಡಿ ಟಾರ್ಗೆಟ್ ಮಾಡಿ ವಂಚಿಸಿದೆ ಎನ್ನಲಾಗಿದೆ. ಈ ಘಟನೆ ಸಂಬAಧ ಮೋಸ ಹೋದವರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿ, ಆದಷ್ಟು ಬೇಗ ತಾಯಿ-ಮಗಳನ್ನು ಪತ್ತೆ ಹಚ್ಚಿ ಎಂದು ಮನವಿ ಮಾಡಿದ್ದಾರೆ.