Mysore
19
clear sky

Social Media

ಮಂಗಳವಾರ, 20 ಜನವರಿ 2026
Light
Dark

ಮಂಡ್ಯ| ಕುತ್ತಿಗೆಗೆ ಹಗ್ಗ ಹಾಕಿ ದರೋಡೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳ ಬಂಧನ

arrest

ಮಂಡ್ಯ: ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಮಂಡ್ಯ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದು, ಹಣ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳು ರಾಬರಿಗೆ ಇಳಿದಿದ್ದರು. ಬಂಧಿತರನ್ನು ಕಿರಣ್‌, ಕುಶಾಲ್‌ ಬಾಬು, ಗೋಕುಲ್‌ ಎಂದು ಗುರುತಿಸಲಾಗಿದೆ.

ಸಾರ್ವಜನಿಕರ ಕುತ್ತಿಗೆಗೆ ಹಗ್ಗೆ ಹಾಕಿ ಅವರನ್ನು ಹೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು.

ಬ್ಯುಸಿನೆಸ್‌ ನೆಪದಲ್ಲಿ ಒಂದಾಗಿದ್ದ ಮೂವರು ದರೋಡೆ ಮಾಡಲು ಹೊರ ರಾಜ್ಯದ ಕಾರನ್ನು ಬಾಡಿಗೆಗೆ ಪಡೆದಿದ್ದರು.

ಕೆಂಗೇರಿ ಬಸ್‌ ನಿಲ್ದಾಣದ ಬಳಿ ಬಸ್‌ ಕಾಯುವವರೇ ಇವರ ಟಾರ್ಗೆಟ್‌ ಆಗಿದ್ದರು. ಡ್ರಾಪ್‌ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಹೋಗುತ್ತಿದ್ದರು. ಮಂಡ್ಯ ಬರುತ್ತಿದ್ದಂತೆ ಅವರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಬೆದರಿಸಿ ಅವರ ಬಳಿ ಇದ್ದ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು.

ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ಸದ್ಯ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Tags:
error: Content is protected !!