ಮಂಡ್ಯ : ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸುವ ಕನಸು ಹೊತ್ತಿದ್ದರು. ಹೀಗಾಗಿ ಅವರ ನೆನಪಿನಲ್ಲಿ ಅವರ ಹುತಾತ್ಮ ದಿನವಾದ ಇಂದು (ಜನವರಿ 30) ಸ್ಪರ್ಶ್ ಕುಷ್ಠರೋಗದ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಫಲಾಗಿದ್ದ ಸ್ಪಶ್೯ ಕುಷ್ಠ ರೋಗ ಅರಿವು ಆಂದೋಲನದ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ವೈದ್ಯರ ಬಳಿ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖ ಮಾಡಿಕೊಳ್ಳುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರಿಗೆ ಕುಷ್ಠರೋಗ ಗುಣಮುಖವಾಗುವುದಿಲ್ಲ ಎಂಬ ಮೂಡನಂಬಿಕೆ ಇದೆ. ಅದನ್ನು ಹೋಗಲಾಡಿಸಬೇಕು.ಇತರೆ ಖಾಯಿಲೆಗಳಂತೆ ಇದೂ ಸಹ ಸಾಮಾನ್ಯ ಖಾಯಿಲೆಗಳಂತೆ ಬಹುಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾದ ಖಾಯಿಲೆ ಎಂದು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ: ಮೋಹನ್ ಮಾತನಾಡಿ, ಜನರಲ್ಲಿ ಕುಷ್ಠರೋಗದ ಕುರಿತು ಇರುವ ಅವೈಜ್ಞಾನಿಕ ನಂಬಿಕೆಗಳು ಹೋಗಲಾಡಿಸಿ, ಜನರಿಗೆ ಕುಷ್ಠರೋಗದ ಅರಿವು ಮೂಡಿಸುವುದು ಈ ಆಂದೋಲನದ ಮೂಲ ಉದ್ದೇಶ, ಕುಷ್ಠರೋಗದ ಮುನ್ಸೂಚನೆ ಬಂದಲ್ಲಿ ಯಾವುದೇ ಭಯ ಪಡದೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಕುಷ್ಠರೋಗ ಆಂದೋಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರತಿಜ್ಞೆ ಬೋಧಿಸಿದರು ಹಾಗೂ ಹಸಿರು ಬಣ್ಣದ ಬಾವುಟ ಪ್ರದರ್ಶಿಸುವ ಮೂಲಕ ಜಾಥಗೆ ಚಾಲನೆ ನೀಡಿದರು.
ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿಯವರೆಗೂ ಕುಷ್ಠರೋಗದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು, ವಿವಿಧ ಕಾಲೇಜುಗಳ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ರಾಜಮೂರ್ತಿ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.