ಮಂಡ್ಯ: ರೈತನ ಕೆಲಸ ಮಾಡಿ ಕೊಡಲು ಹತ್ತು ಸಾವಿರ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟು, ರೈತನಿಂದ ಹಣ ಪಡೆದುಕೊಳ್ಳವಾಗ ಮಂಡ್ಯ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಮರಕಾಡದೊಡ್ಡಿಯ ಮೋಹನ್ ಎಂಬುವವರ ಬಳಿ ಎಫ್‌ಡಿಎ ಅಧಿಕಾರಿ ತಿಪ್ಪೇಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯಕ್ತಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆ ಲೋಕಾಯುಕ್ತ ಸಿಪಿಐ ಬ್ಯಾಟರಾಜಗೌಡ ಅವರ ನೇತೃತ್ವದ ತಂಡ ಇಂದು ದಾಳಿ ನಡೆಸಿ ತಿಪ್ಪೇಸ್ವಾಮಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದೆ.