Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ಮಂಡ್ಯ| ಟಿಪ್ಪರ್‌ ಹಾಗೂ ಕಾರಿನ ನಡುವೆ ಡಿಕ್ಕಿ: ಓರ್ವ ಸಜೀವ ದಹನ

ಮಂಡ್ಯ: ಟಿಪ್ಪರ್‌ ಹಾಗು ಕಾರಿನ ನಡುವೆ ಡಿಕ್ಕಿಯಾಗಿ ಕಾರು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಬಳಿ ನಡೆದಿದೆ.

ಹುಣಸೂರು ಮೂಲದ ಚಂದ್ರಶೇಖರ್‌ ಮೃತ ದುರ್ದೈವಿಯಾಗಿದ್ದಾನೆ. ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಹುಣಸೂರು ಕಡೆಗೆ ಹೋಗುತ್ತಿದ್ದ ಕಾರು ಶ್ರೀರಂಗಪಟ್ಟಣ ಕಡೆಗೆ ಬರುತ್ತಿದ್ದ ಟಿಪ್ಪರ್‌ ನಡುವೆ ಡಿಕ್ಕಿ ಸಂಭವಿಸಿತ್ತು. ತಕ್ಷಣ ಕಾರು ಹೊತ್ತಿ ಉರಿದಿದ್ದು, ಚಾಲಕ ಸಾವನ್ನಪ್ಪಿದ್ದಾನೆ.

ಚಂದ್ರಶೇಖರ್‌ ಮೃತದೇಹವನ್ನು ಕೆ.ಆರ್‌.ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-6 ವರ್ಷಗಳ ನಂತರ ಡೊನಾಲ್ಡ್‌ ಟ್ರಂಪ್-‌ ಕ್ಸಿ ಜಿನ್‌ಪಿಂಗ್‌ ಭೇಟಿ

Tags:
error: Content is protected !!