Mysore
17
few clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ರೈತರ ಮೊಗದಲ್ಲಿ ಮಂದಹಾಸ

KRS releases water to canals

ಮಂಡ್ಯ: ರೈತರ ಜೀವನಾಡಿಯಾಗಿರುವ ಕೆಆರ್‌ಎಸ್‌ ಅಣೆಕಟ್ಟೆ ಜೂನ್‌ ತಿಂಗಳಿನಲ್ಲಿಯೇ ಸಂಪೂರ್ಣ ಭರ್ತಯಾಗಿದ್ದು, ಇಂದು ನಾಲೆಗಳಿಗೆ ನೀರು ಬಿಡಲಾಗಿದೆ.

ಜೂನ್‌ ತಿಂಗಳಿನಲ್ಲಿಯೇ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೂ ರೈತರ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಿರಲಿಲ್ಲ. ಆದರೆ ರೈತರು ತೀವ್ರ ಹೋರಾಟ ಮಾಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಇಂದು ಬೆಳಿಗ್ಗೆಯೇ ನಾಲೆಗಳಿಗೆ ನೀರು ಹರಿಸಿದೆ.

ಮಂಡ್ಯ ಭಾಗದಲ್ಲಿ ಮುಂಗಾರು ಮಳೆ ಇದುವರೆಗೂ ಅಷ್ಟೇನು ಚುರುಕು ಪಡೆದುಕೊಂಡಿಲ್ಲ. ಪರಿಣಾಮ ಈ ಭಾಗದಲ್ಲಿ ರೈತರ ಬೆಳೆಗಳು ಒಳಗುತ್ತಿವೆ.

ಆದರೆ ಕೆಆರ್‌ಎಸ್‌ ಜಲಾಶಯ ತುಂಬಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆಯ ಕಾಮಗಾರಿ ನೆಪ ಹೇಳಿ ನಾಲೆಗೆ ನೀರು ಬಿಟ್ಟಿರಲಿಲ್ಲ. ಈಗ ರೈತ ಸಂಘಟನೆಗಳು ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಇಂದು ಬೆಳಿಗ್ಗೆ ವಿಸಿ ನಾಲೆಯ ಮೂಲಕ ನಾಲೆಗಳಿಗೆ ನೀರು ಹರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.

Tags:
error: Content is protected !!